ತಮಿಳುನಾಡು : ಕಳೆದ 7 ತಿಂಗಳಿಂದ 22 ವರ್ಷದ ದಲಿತ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ತಮಿಳುನಾಡಿನ ವಿರುದುನಗರದಲ್ಲಿ ನಡೆದಿದೆ. ಈ ಹೇಯ ಕೃತ್ಯದಲ್ಲಿ ಇಬ್ಬರು ಡಿಎಂಕೆ ಸದಸ್ಯರು ಸೇರಿದಂತೆ 8 ಮಂದಿ ಅತ್ಯಾಚಾರವೆಸಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸದ್ಯ ಈ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳಲ್ಲಿ ನಾಲ್ವರು ಅಪ್ರಾಪ್ತರು ಮತ್ತು ಇಬ್ಬರು ಡಿಎಂಕೆ ಸದಸ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಹರಿಹರನ್ ಮಹೇಂದ್ರನ್ ಎಂಬಾತ ಸಂತ್ರಸ್ತೆಯ ಮೇಲೆ ನಡೆಸಿದ ಅತ್ಯಾಚಾರದ ವಿಡಿಯೋ ಮಾಡಿ ಅದನ್ನು ವೈರಲ್ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಸಂತ್ರಸ್ತೆ ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ತನ್ನ ಜೊತೆಗಿನ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಬಳಸಿಕೊಂಡು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ, ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
22/03/2022 10:57 pm