ಭೋಪಾಲ್: ಜಾತ್ರೆಯಲ್ಲಿ ಹಾಡ ಹಗಲೇ ಬಾಲಕಿಗೆ ಯುವಕರ ಗುಂಪೊಂದು ಲೈಂಗಿಕ ಕಿರುಕುಳ ನೀಡಿದ ಘಟನೆ ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ನಡೆದಿದೆ.
ಬುಡಕಟ್ಟು ಜನರು ಆಚರಿಸುವ ಭಗೋರಿಯಾ ಹಬ್ಬದ ಸಂದರ್ಭದಲ್ಲಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾತ್ರೆಯ ಸಂದರ್ಭದಲ್ಲಿ ಜನನಿಬಿಡ ರಸ್ತೆಯೊಂದರಲ್ಲಿ ಯುವಕರ ಗುಂಪೊಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಮೊದಲು ಯುವಕನೋರ್ವ ಕಿರುಕುಳ ನೀಡಿದ್ದರಿಂದ ಬಾಲಕಿ ಕಿರುಚುತ್ತಾಳೆ. ಇದನ್ನು ಕೇಳಿಸಿಕೊಂಡ ಯುವಕರ ಗುಂಪೊಂದು ಬಾಲಕಿಗೆ ಸಹಾಯ ಮಾಡುವ ಬದಲು ಒಬ್ಬೊಬ್ಬರಾಗಿ ಬಂದು ಕಿರುಕುಳ ನೀಡುತ್ತಾರೆ. ಇನ್ನು ಕೆಲವರು ಈ ಅಮಾನವೀಯ ಕೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
PublicNext
13/03/2022 03:13 pm