ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ವಿಚಾರಕ್ಕೆ ಮಗಳನ್ನೇ ಕೊಂದ ತಂದೆ- ಪಾಪಿಗೆ ಸಹೋದರರ ಸಾಥ್

ಪಾಟ್ನಾ: ಪಾಪಿಯೋರ್ವ ತಾನು ತೋರಿಸಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ಮಗಳನ್ನೇ ಕೊಲೆಗೈದ ಅಮಾನವೀಯ ಘಟನೆ ಬಿಹಾರದ ಕೊಟ್ವಾ ಗ್ರಾಮದಲ್ಲಿ ನಡೆದಿದೆ.

ಇಂದ್ರದೇವೋ ರಾಮ್ ತನ್ನ ಇಬ್ಬರು ಸಹೋದರರ ಜೊತೆಗೆ ಸೇರಿ ಮಗಳನ್ನು ಕೊಲೆಗೈದಿದ್ದಾರೆ. ಬಳಿಕ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಮಗಳು ಯುವಕನೋರ್ವನನ್ನು ತುಂಬಾ ಪ್ರೀತಿಸುತ್ತಿದ್ದಳು. ಆದರೆ ಇದಕ್ಕೆ ಒಪ್ಪದ ನನ್ನ ಪತಿ ಹಾಗೂ ಅವರ ಸಹೋದರರು ಮಗಳನ್ನು ಕೊಲೆಗೈದಿದ್ದಾರೆ ಎಂದು ಮೃತ ಯುವತಿಯ ತಾಯಿ ಕಮಲಾವತಿ ದೂರಿದ್ದಾಳೆ.

Edited By : Vijay Kumar
PublicNext

PublicNext

07/03/2022 07:20 pm

Cinque Terre

30.06 K

Cinque Terre

2