ಕೊಚ್ಚಿ: ಟ್ಯಾಟೂ ಅಂದ್ರೆ ಈಗ ಫ್ಯಾಷನ್. ಇದನ್ನ ಹಾಕಿಸಿಕೊಳ್ಳಲು ಎಲ್ಲರೂ ಮುಗಿ ಬೀಳ್ತಾರೆ. ಅದರಲ್ಲೂ ಮಹಿಳೆಯರನ್ನ ಈ ಟ್ಯಾಟೂ ಕಲೆ ಹೆಚ್ಚು ಸೆಳೆಯುತ್ತಿದೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮಹಿಳೆಯರೇ ನೀವು ಹುಷಾರ್ ಆಗಿರಬೇಕು. ಯಾಕಂತೀರೋ ? ಹಾಗಾದ್ರೆ ಈ ಸ್ಟೋರಿ ಓದಿ.
ಟ್ಯಾಟೂ ಹಾಕುವ ನೆಪದಲ್ಲಿ ಇಲ್ಲಿಯ ಟ್ಯಾಟೂ ಕಲಾವಿದ ಸುಜೀಶ್ ಪಿಎಸ್ ಅನ್ನೋ ವ್ಯಕ್ತಿ ಈಗ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರೋ ಆರೋಪ ಎದುರಿಸುತ್ತಿದ್ದಾನೆ.
ಹೌದು. ಕೊಚ್ಚಿ ಪೊಲೀಸರು ಈ ಆರೋಪಿಯನ್ನ ಬಂಧಿಸಿದ್ದಾರೆ. ಆರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಟ್ಯಾಟೂ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಸಮಯದಲ್ಲಿಯ ಸುಜೀಶ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 18 ವರ್ಷದ ಯುವತಿ ಈಗ ಆರೋಪಿಸಿದ್ದಾಳೆ.
PublicNext
06/03/2022 12:17 pm