ಮುಂಬೈ: ಕಳೆದ ಮೂರು ವರ್ಷಗಳಿಂದ ತನ್ನ 22 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಮತ್ತು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ 50 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪಾಪಿ ಪತಿಯ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ ಸಂತ್ರಸ್ತೆಯ 40 ವರ್ಷದ ತಾಯಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಆರೋಪಿಯು ತನ್ನ ಮಗಳ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಸಿಗರೇಟ್‌ನಿಂದ ಮಗಳ ಮೇಲೆ ಗಾಯಗಳನ್ನು ಕೂಡ ಮಾಡಿದ್ದಾನೆ. ಈ ವಿಚಾರವನ್ನು ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರಿಯ ಬಳಿ ಹೇಳಿಕೊಂಡಿದ್ದಾಳೆ. ಆದರೆ ಅವರು ಈ ವಿಚಾರವನ್ನು ಯಾರ ಮುಂದಿಯೂ ಹೇಳಿಕೊಳ್ಳದಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಾಯಿಯು ಗರ್ಭನಿರೋಧ ಮಾತ್ರೆ ನೀಡಿದ್ದಾಳೆ.
ಈ ಬಗ್ಗೆ ಯುವತಿ ದೂರು ನೀಡುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಪಾಪಿ ತಂದೆಯು ಸಂತ್ರಸ್ತೆಯ ಮೇಲೂ ಅತ್ಯಾಚಾರ ಎಸಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
03/03/2022 05:34 pm