ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆತ್ತ ಅಮ್ಮನೇ ಮಗಳನ್ನ ಎಳೆದಾಡಿ ಬಿಸಾಕಿದ ವೀಡಿಯೋ ವೈರಲ್ !

ಮಧ್ಯಪ್ರದೇಶ: ಅಮ್ಮ ಅಂದ್ರೆ ದೇವರು. ಅಮ್ಮ ಅಂದ್ರೆ ಸರ್ವಸ್ವ. ಆದರೆ ಈ ಅಮ್ಮನ ಕೃತ್ಯಕ್ಕೆ ಇಡೀ ಹೆಣ್ಣು ಕುಲವೇ ಬೇಸರ ಪಟ್ಟುಕೊಳ್ಳುತ್ತಿದೆ. ಸುಮಾರು ಒಂದೂವರೆ ವರ್ಷದ ಹೆಣ್ಣುಮಗುವನ್ನ ಅಮ್ಮನೇ ಹೊರಗೆಳೆದು ಬಿಸಾಕಿದ್ದಾಳೆ. ಆದರೆ ಈ ಘಟನೆಯ ಹಿಂದೆ ಇನ್ನೂ ಒಂದು ಘೋರ ಸತ್ಯ ಇದೆ. ಬನ್ನಿ, ಹೇಳ್ತೀವಿ.

ಮಧ್ಯಪ್ರದೇಶದ ಉಜ್ಜಯಿನಿಯ ಬಾದ್‌ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಟೆರಸ್ ಮೇಲಿಂದ ಅಮ್ಮ-ಮಗಳ ಈ ಕೃತ್ಯವನ್ನ ಅದ್ಯಾರೋ ಪುನ್ಯಾತ್ಮರು ಸೆರೆ ಹಿಡಿದ್ದಾರೆ.ಈ ವೀಡಿಯೋದಲ್ಲಿ ಸೆರೆ ಆಗಿರೋ ಅಮ್ಮನ ಕೃತ್ಯ ಎಂತವರನ್ನೂ ರೊಚ್ಚಿಗೆಬ್ಬಿಸುತ್ತದೆ.

ಆದರೆ ದುರಂತ ನೋಡಿ,ಅಮ್ಮನ ಫ್ರಸ್ಟ್ರೇಷನ್ ಲೆವ್ಲ ಈ ಮಟ್ಟಕ್ಕಿದೆ. ಇದಕ್ಕೆ ಕಾರಣ ಅಮ್ಮನ ಮೇಲೆ ಆಗಿರೋ ರೇಪ್ ಇರಬಹುದು. ಹೌದು. ನೀವು ನೋಡಿರೋ ಈ ವೀಡಿಯೋದಲ್ಲಿರೊ ತಾಯಿ ಮೇಲೆ ರೇಪ್ ಆಗಿದೆ. ಆ ಘಟನೆಯಿಂದಲೇ ಈ ಮಗು ಹುಟ್ಟಿದಿಯೋ ಏನೋ.ಗೊತ್ತಿಲ್ಲ.

ಅಮ್ಮನ ಈ ಕೃತ್ಯಕ್ಕೆ ಪೊಲೀಸರು ಈಗ ತಾಯಿಯನ್ನ ಅರೆಸ್ಟ್ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಮಗುವನ್ನ ಚೈಲ್ಡ್ ಲೈನ್ ತಂಡಕ್ಕೆ ಒಪ್ಪಿಸಿದ್ದಾರೆ.

Edited By : Shivu K
PublicNext

PublicNext

28/02/2022 12:05 pm

Cinque Terre

62.66 K

Cinque Terre

0