ಕಲಬುರಗಿ : ಹೆಣ್ಣಿಗೆ ಕಷ್ಟ ಅಂತಾ ಬಂದಾಗ ನೆನಪಾಗೋದೆ ತವರು, ಗಂಡನ ಮನೆಯವರ ಕಾಟಕ್ಕೆ ತವರಿಗೆ ಬಂದಿದ್ದ ತಂಗಿಯ ಮೇಲೆ ಅಣ್ಣ ಅತ್ತಿಗೆಯಿಂದ ಹಲ್ಲೆ ಮಾಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಇನ್ನು ಕ್ರೂರ ಅಣ್ಣ ಅತ್ತಿಗೆ ಒತ್ತಾಯಿಸಿ ಬಡಿಗೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಇನ್ನು ಅಣ್ಣ ಅತ್ತಿಗೆಯಿಂದ ಹಲ್ಲೆಗೊಳಗಾದ ಕವಿತಾಳನ್ನು ಗಂಡ ಸರಿಯಿಲ್ಲ ಎನ್ನುವ ಕಾರಣಕ್ಕೆ ಅವಳ ಮತ್ತೊಬ್ಬ ಸಹೋದರ ತವರಿಗೆ ಕರೆತಂದಿದ್ದ ಕಳೆದ ನಾಲ್ಕು ತಿಂಗಳಿನಿಂದ ಗಂಡನ ಮನೆ ಬಿಟ್ಟ ಕವಿತಾ ತವರಲ್ಲಿ ತಂದೆ ತಾಯಿ ಸಹೋದರರ ಜೊತೆ ವಾಸವಾಗಿದ್ದಳು.
ಇನ್ನು ಕವಿತಾ ತವರು ಮನೆಯಲ್ಲಿ ಇರುವ ವಿಚಾರಕ್ಕೆ ಪದೇ ಪದೇ ಗಲಾಟೆ ತೆಗೆಯುತ್ತಿದ್ದ ಸಹೋದರ ಕೊನೆ ಅವಳ ಮೇಲೆ ಹಂಡತಿಯೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ.
ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
15/02/2022 08:35 pm