ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೌಕೆಯಲ್ಲಿ ಸಾಗಾಟವಾಗುತ್ತಿದ್ದ 2000 ಕೋಟಿ ಮೌಲ್ಯದ ಡ್ರಗ್ಸ್ ವಶ

ನವದೆಹಲಿ : ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆಯಲ್ಲಿ 800 ಕೆಜಿ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು 2000 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮಾದಕವಸ್ತುಗಳಲ್ಲಿ 525 ಕೆಜಿ ಉತ್ತಮ ಗುಣಮಟ್ಟದ ಹ್ಯಾಶಿಶ್ ಮತ್ತು 234 ಕೆಜಿ ಉತ್ತಮ ಗುಣಮಟ್ಟದ ಕ್ರಿಸ್ಟಲ್ ಮೆಥಾಂಫೆಟಮೈನ್ ಸೇರಿವೆ.

ಗುಪ್ತರ ಮಾಹಿತಿ ಮೇರೆಗೆ ಎನ್ ಸಿಬಿಯ ವಿಶೇಷ ಘಟಕ ನೌಕಾ ಪಡೆ ಸಂಸ್ಥೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಸಮುದ್ರದಲ್ಲಿ ಸಾಗಾಟವಾಗುತ್ತಿದ್ದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ.

ಇನ್ನು ಫೆಬ್ರವರಿ 10 ರ ರಾತ್ರಿ ಈ ಕಾರ್ಯಾಚರಣೆ ನಡೆಸಿ 760 ಕೆಜಿ ತೂಕದ 36 ಚೀಲದಲ್ಲಿದ್ದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇನ್ನು ಈ ಮಾದಕ ವಸ್ತುಗಳ ಪ್ಯಾಕಿಂಗ್ ಮೇಲೆ ಉರ್ದು ಬರಹಗಳಿವೆ.

ಸದ್ಯ ನಿಷೇಧಿತ ವಸ್ತುವನ್ನು ಗುಜರಾತ್ ನ ಪೋರಬಂದರ್ ಗೆ ತರಲಾಗಿದ್ದು ಅಲ್ಲಿ ಎನ್ಸಿಬಿ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಇನ್ನು NCB ಯ DDG ಸಂಜಯ್ ಸಿಂಗ್ ಅವರು ಈ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು. ಕಾರ್ಯಾಚರಣೆಯು ಅತ್ಯಂತ ದೊಡ್ಡ ಯೋಜಿತ ಮತ್ತು ಕಾರ್ಯಗತಗೊಳಿಸಿದ ಕಾರ್ಯಾಚರಣೆಯಾಗಿದೆ ಇದರ ಸಂಪೂರ್ಣ ಕ್ರೆಡಿಟ್ ತಂಡಕ್ಕೆ ಸಲ್ಲುತ್ತದೆ ಎಂದು ಸಿಂಗ್ ಹೇಳಿದರು.

Edited By : Nirmala Aralikatti
PublicNext

PublicNext

13/02/2022 09:17 am

Cinque Terre

57.11 K

Cinque Terre

6

ಸಂಬಂಧಿತ ಸುದ್ದಿ