ಗಾಂಧಿನಗರ: ಎಂಟು ತಿಂಗಳ ಕಂದಮ್ಮನ ಮೇಲೆ ದಾದಿಯೊಬ್ಬಳು ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ದಾದಿಯ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಕೋಮಲ್ ಚಾಂಡ್ಲೇಕರ್ ಹಲ್ಲೆ ನಡೆಸಿದ ದಾದಿ. ಸೂರತ್ನ ರಾಂದರ್ಪಾಲನ್ಪುರ್ದಲ್ಲಿ ವಾಸವಾಗಿರುವ ಮಗುವಿನ ಪೋಷಕರಿಬ್ಬರು ಉದ್ಯೋಗಿಗಳಾಗಿದ್ದು, ಅದೇ ಕಾರಣಕ್ಕಾಗಿ 8 ತಿಂಗಳ ಶಿಶು ನೋಡಿಕೊಳ್ಳಲು ದಾದಿ ನೇಮಕ ಮಾಡಿದ್ದಾರೆ. ನೆರೆಹೊರೆಯವರು ಕೂಡ ದಾದಿ ಜೊತೆ ಇರುವಾಗ ಮಗು ತುಂಬಾ ಅಳುತ್ತದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಆಕೆಯ ಮೇಲೆ ನಿಗಾವಹಿಸುವ ಉದ್ದೇಶದಿಂದ ಮನೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದರು. ಈ ವೇಳೆ ದಾದಿಯ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿನ್ನೆ ಮಗುವಿನ ಮೇಲೆ ದಾದಿ ಹಲ್ಲೆ ಮಾಡಿದ್ದಾಳೆ. ಹೀಗಾಗಿ, ಅದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಇದರ ಬೆನ್ನಲ್ಲೇ ಮಗುವಿನ ತಂದೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರ ಮೆದುಳಿನಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಹೀಗಾಗಿ ಅದನ್ನು ವೆಂಟಿಲೇಟರ್ನಲ್ಲಿಡಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
PublicNext
06/02/2022 07:02 pm