ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದವನಿಗೆ ಬಹಿಷ್ಕಾರದ ಶಿಕ್ಷೆ

ಚಿಕ್ಕಮಗಳೂರು : ಕಾಫಿನಾಡಲ್ಲಿ ಇನ್ನೂ ಬಹಿಷ್ಕಾರ ಪಿಡುಗಿನ ಅಂಟು ರೋಗ ನಿಂತಿಲ್ಲ. ಸದ್ಯ ದಲಿತ ಯುವತಿಯನ್ನ ಮದುವೆಯಾಗಿದಕ್ಕೆ ಸ್ವಜಾತಿಯವರಿಂದ ಯುವಕನೊರ್ವನನ್ನು ಊರಿನಿಂದ ಬಹಿಷ್ಕಾರ ಹಾಕಿದ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಂದ್ರಶೇಖರ್ ಎಂಬ ಯುವಕ ದಲಿತ ಯುವತಿಯನ್ನು ಮದುವೆಯಾಗಿದ್ದಾನೆ ಹಾಗಾಗಿ ಸ್ವಜಾತಿ ಮುಖಂಡರು ಚಂದ್ರಶೇಖರ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಇವರ ಜೊತೆ ಯಾರಾದರೂ ಮಾತಾನಾಡಿದರೆ ಐದು ಸಾವಿರ ದಂಡ ಹಾಕಲಾಗುತ್ತದೆ. ಊರಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೂ ಕೂಡಾ ಇವರನ್ನು ಆಹ್ವಾನಿಸುವಂತಿಲ್ಲ.

ಸದ್ಯ ಹಿಂದೂ ಧರ್ಮದಿಂದ ಬೇಸತ್ತ ಈ ಕುಟುಂಬ ಕ್ರೈಸ್ತ ಧರ್ಮಕ್ಕೆ ಮಂತಾತರಗೊಳ್ಳಲು ಚಿಂತಿಸುತ್ತಿದ್ದಂತೆ ಇವರ ಮನವೊಲಿಸಿದ ಹಿಂದು ಧರ್ಮದ ಮುಖಂಡರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Edited By : Nagesh Gaonkar
PublicNext

PublicNext

04/02/2022 04:12 pm

Cinque Terre

73.78 K

Cinque Terre

5