ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲ್ಫಿ ಹುಚ್ಚಿಗೆ ಬಿದ್ದ ನರ್ಸಿಂಗ್ ವಿದ್ಯಾರ್ಥಿ ನೀರುಪಾಲು.!

ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ಬಿದ್ದ ವಿದ್ಯಾರ್ಥಿಯೋರ್ವ ನೀರುಪಾಲಾದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ.

ಮೈಸೂರು ಮೂಲದ ಸಂಗಮೇಶ್ ಎಂಬುವರ ಮಗ ಉಮಾಶಂಕರ್ (19) ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ. ಉಮಾಶಂಕರ್ ಸ್ನೇಹಿತರಾದ ರವಿಕುಮಾರ್, ಶಿವಪ್ರಸಾದ್ ಅವರೊಟ್ಟಿವೆ ರಜೆಗೆ ಹೊಗೆನಕಲ್ ಜಲಪಾತಕ್ಕೆ ತೆರಳಿದ್ದ. ಈ ವೇಳೆ ಸೆಲ್ಫಿ ಹುಚ್ಚಿನಿಂದಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಜಲಪಾತದ ಬಳಿ ತೆರಳಿದ್ದ. ದುರಾದೃಷ್ಟವಶಾತ್ ಉಮಾಶಂಕರ್ ಕಾಲುಜಾರಿ ನೀರುಪಾಲಾಗಿದ್ದಾನೆ.

ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್ ಸ್ನೇಹಿತರು ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿದ್ದ. ಆಗ ಸ್ನೇಹಿತರನ್ನು ಫೋಟೋ ತೆಗೆಯುವಂತೆ ಹೇಳಿದ್ದಾನೆ. ಸ್ನೇಹಿತರು ಫೋಟೋಗಳನ್ನು ತೆಗೆದ ಬಳಿಕ ಜಲಪಾತದ ಕೊರಕಲ್ಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಮಲೆ ಮಹದೇಶ್ವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Vijay Kumar
PublicNext

PublicNext

28/01/2022 08:09 am

Cinque Terre

73.85 K

Cinque Terre

0

ಸಂಬಂಧಿತ ಸುದ್ದಿ