ಹಾವೇರಿ: ಹೆಣ್ಣು, ಹೊನ್ನು ,ಮಣ್ಣಿನ ಮೇಲಿನ ಆಸೆ ಎಂತವರನ್ನೂ ಶತ್ರುಗಳನ್ನಾಗಿಸಿ ಮನುಷತ್ವ ರಹಿತರಂತೆ ಮಾಡುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಇವರೇನು ಮನುಷ್ಯರಾ ?ಅಥವಾ ರಾಕ್ಷಸರಾ?ಎಂದು ಅನಿಸಿಬಿಡುತ್ತೆ ಈ ದೃಶ್ಯವನ್ನು ನೋಡುತ್ತಿದ್ದರೆ.ಹೌದು
ಜಮೀನು ಪೋಡಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಈ ವೇಳೆ ಅಮಾಯಕ ಜೀವವನ್ನು ಮನಬಂದಂತೆ ಥಳಿಸಿರುವ ಘಟನೆ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಶಿವಾನಂದ ಕೋಡಿಹಳ್ಳಿ ಹಾಗೂ ರತ್ನಮ್ಮ ಕುಪಗಡ್ಡಿ ಎಂಬುವವರ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.ಪೋಡಿ ವಿಚಾರವಾಗಿ ಡಿ.ಡಿ.ಎಲ್ ಆರ್ ಗೆ ಶಿವಾನಂದ ಕೋಡಿಗಳ್ಳಿ ದಾವೆ ಹಾಕಿದ್ದರು.ಪೋಡಿ ,ಕಬ್ಜಾ ಪರಿಶೀಲನೆಗೆ, ಸ್ಥಳ ಪರಿಶೀಲನೆಗೆ ಎಡಿಎಲ್ ಆರ್ ಅಧಿಕಾರಿಗಳು ಆಗಮಿಸಿದಾಗ, ಅಲ್ಲೇ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ವೃದ್ದೆ ರತ್ನಮ್ಮ ಹಾಗೂ ಅವರ ಮಗ ಶಂಕ್ರಪ್ಪ ಮತ್ತು ಅವರ ಪತ್ನಿ ಶಿಲ್ಪಾ , ಇದು ನಮ್ಮ ಜಮೀನು ಎಂದಿದ್ದಾರೆ ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹೊಲದಲ್ಲಿನ ಕಲ್ಲು, ಮಣ್ಣಿನ ಹೆಂಟೆಯನ್ನು ವಯಸ್ಸಾದ ರತ್ನಮ್ಮ ಎಂಬುವವರ ಮೇಲೆ ಶಿವಾನಂದ ಮಲ್ಲೇಶಪ್ಪ ಕೋಡಿಹಳ್ಳಿ ಕುಟುಂಬಸ್ಥರು ಎತ್ತಿಹಾಕಿ ಹಲ್ಲೆ ಮಾಡಿದ್ದಾರೆ.
ಸ್ಥಳದಲ್ಲಿಯೇ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ಶುರುವಾಗಿದೆ. ಈ ವೇಳೆ ಶಿವಾನಂದ ಮಲ್ಲೇಶಪ್ಪ ಕೋಡಿಹಳ್ಳಿ, ರುದ್ರಪ್ಪ, ರವೀಂದ್ರ, ನಾಗಪ್ಪ ಸೇರಿದಂತೆ 12 ಜನರು ಏಕಾಏಕಿ ಧಾಳಿ ಮಾಡಿರುವುದರಿಂದ ವೃದ್ದೆ ರತ್ನಮ್ಮ ಸ್ಥಳದಲ್ಲೇ ಅಸ್ವಸ್ಥಗೊಂಡಿದ್ದಾರೆ.
ಈ ದೃಶ್ಯ ನೋಡಿದರೆ ನಿಮ್ಮ ಮನ ಕರಗದೇ ಇರದು, ಅಯ್ಯೋ ಇಂಥ ನೀಚರೂ ಇದ್ದಾರಾ ಅನಿಸಿ ಬಿಡುತ್ತೆ, ಪರಸ್ಪರ ಹೊಡೆದಾಡಿಕೊಂಡ ಕಾರಣ ಎರಡೂ ಕುಟುಂಬಸ್ಥರೂ ಗಾಯಗೊಂಡಿದ್ದಾರೆ. ಸದ್ಯ ಹಾನಗಲ್ ತಾಲೂಕು ಆಡೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/01/2022 05:31 pm