ದಾವಣಗೆರೆ: ಮನೆಯ ಡೋರ್ ಲಾಕ್ ಮಾಡಿ ಕೋಳಿಗಳನ್ನು ಕಳ್ಳತನ ಮಾಡಿರುವ ಘಟನೆ ನಗರದ ಹೊರವಲಯದ ಹೊಸಕುಂದವಾಡ ಗ್ರಾಮದಲ್ಲಿ ನಡೆದಿದೆ.
ಕೋಳಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆರು ಕೋಳಿಗಳನ್ನು ಕಳ್ಳರು ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಹೊರಗಡೆ ಇದ್ದ ಕಪಾಟಿನಲ್ಲಿ ಫೈಟರ್ ಕೋಳಿಗಳನ್ನು ಮಾಲೀಕ ಬಸವರಾಜ್ ಇರಿಸಿದ್ದರು.
ರಾತ್ರಿ 10. 45 ರ ಸುಮಾರಿನಲ್ಲಿ ಕೋಳಿ ಕಳ್ಳತನ ಮಾಡಿ ಖದೀಮರು ಎಸ್ಕೇಪ್ ಆಗಿದ್ದಾರೆ. ಫೈಟರ್ ಕೋಳಿ ಆಗಿದ್ದರಿಂದ ಒಂದು ಕೋಳಿ ಮರಿ 1500 ರೂಪಾಯಿಂದ 2 ಸಾವಿರ ರೂಪಾಯಿ ಬೆಲೆ ಬಾಳುತ್ತೆ. ಹೀಗಾಗಿ 6 ಕೋಳಿಗಳನ್ನು ಕಳ್ಳತನ ಮಾಡಿದ್ದಾರೆ. ದಾವಣಗೆರೆಯ ವಿದ್ಯಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
PublicNext
21/01/2022 05:25 pm