ಮಧ್ಯಪ್ರದೇಶ: ಪ್ರಿನ್ಸಿಪಾಲರ ಮುಂದೆ ಕುಳಿತ ಪ್ರೊಫೆಸರ್. ಮಾತಿಗೆ ಮಾತು ಜೋರಾಗಿವೆ. ಕ್ಷಣ ಮಾತ್ರದಲ್ಲಿಯೇ ಬುಕ್ ಎಸೆದೇ ಬಿಟ್ಟರು ಪ್ರೊಫೆಸರ್. ಬಳಿಕ ಹಿಂದೆ ಮುಂದೆ ನೋಡದೇ ಪ್ರಿನ್ಸಿಪಾರಿಗೆ ಹೊಡೆದೇ ಬಿಟ್ಟರು. ಈ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಉಜ್ಜೈನ್ ಎಂಪಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪ್ರಿನ್ಸಿಪಾಲರ ಕಚೇರಿಯಲ್ಲಿಯೇ ಫ್ರೋಫೆಸರ್ ಹಲ್ಲೆ ಮಾಡಿದ್ದಾರೆ. ಮೊದಲು ಮಾತಿನ ಚಕಮಕಿ ಆಗಿದೆ. ನಂತರ ಪ್ರಿನ್ಸಿಪಾಲರ ಮೇಲೆ ಪ್ರೋಫೆಸರ್ ಹಲ್ಲೆ ಮಾಡಿದ್ದಾರೆ.
ಈ ದೃಶ್ಯ ಸಿಸಿಟಿಯಲ್ಲಿ ಕ್ಯಾಪರ್ ಆಗಿದೆ.
ಪ್ರೋಫೆಸರ್ ವಿರುದ್ಧ ಪ್ರಿನ್ಸಿಪಾಲರು ಈಗ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದರೆ ಪ್ರಿನ್ಸಿಪಾಲರ ಮೇಲೆ ಫ್ರೋಫೆಸರ್ ಕೈ ಮಾಡಿರೋದು ಯಾಕೆ ಅನ್ನೋ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ. ವೀಡಿಯೋ ಮಾತ್ರ ವೈರಲ್ ಆಗ್ತಾನೇ ಇದೆ.
PublicNext
19/01/2022 10:55 pm