ಮಂಡ್ಯ: ಮದ್ದೂರು ಪಟ್ಟಣದ ತಾಲೂಕು ಕಚೇರಿಯ ಕಟ್ಟಡದ ಮೇಲಿಂದ ಸರ್ಕಾರಿ ನೌಕರನೋರ್ವ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಮಂಡ್ಯ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ವೆಂಕಟೇಶ್ (48) ಆತ್ಮಹತ್ಯೆ ಮಾಡಿಕೊಂಡ ನೌಕರ ಎಂದು ತಿಳಿದು ಬಂದಿದೆ.ಇಂದು ಮಧ್ಯಾಹ್ನ ಕಾರ್ಯ ನಿಮಿತ್ತ ಮದ್ದೂರು ತಾಲೂಕು ಕಚೇರಿಗೆ ಬಂದಿದ್ದ.
ಈ ವೇಳೆ ಇದ್ದಕ್ಕಿದಂತೆ ಕಟ್ಟಡದ ಮೇಲೆ ತೆರಳಿ ಮೇಲಿಂದ್ದ ಬಿದ್ದು ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ವೆಂಕಟೇಶ್ ರನ್ನು ತಕ್ಷಣ ತಾಲ್ಲೂಕು ಕಛೇರಿ ಸಿಬ್ಬಂದಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ವೆಂಕಟೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
17/01/2022 10:39 am