ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ:ಅಪ್ರಾಪ್ತ ಹುಡ್ಗಿ ಪ್ರೀತಿಸಿ ಜೈಲು ಸೇರಿದ:ಆಕೆ ಮನೆಯವರ ಕಾಟಕ್ಕೆ ಸತ್ತೇ ಹೋದ

ಹಾವೇರಿ:ಅಪ್ರಾಪ್ತ ಹುಡುಗಿಯನ್ನ ಪ್ರೀತಿಸಿದಕ್ಕೆ ಫೋಕ್ಸೋ ಪ್ರಕರಣದಡಿ ಆ ಯುವಕ ಜೈಲು ಪಾಲಾಗಿದ್ದ. ಜೈಲಿನಿಂದ

ಹೊರಗೂ ಬಂದಿದ್ದ. ಆದರೆ ಹುಡುಗಿಯ ಮನೆಯವರ ಕಿರುಕುಳ ತಾಳಲಾರದೆ ಈಗ ಅದೇ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಬನ್ನಿಹಟ್ಟಿ ತಾಂಡ ಗ್ರಾಮದಲ್ಲಿ ನಡೆದ.

ಕಳೆದ ಒಂದು ವರ್ಷದ ಹಿಂದೆ ಪ್ರಸನ್ನ ಅನ್ನೋ ಯುವಕ ಕಾವ್ಯ ಅನ್ನೋ ಅಪ್ರಾಪ್ತ ಹುಡುಗಿಯನ್ನ ಪ್ರೀತಿಸಿದ್ದ. ಅದಕ್ಕೇನೆ ಫೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಅದರಿಂದ ಜೈಲಿಗೂ ಹೋಗಿ ಬಂದಿದ್ದಾನೆ.

ಆದರೆ ಕಾವ್ಯಳ ಮನೆಯವರ ಕಾಟಕ್ಕೆ ಮನನೊಂದ ಯುವಕ ಪ್ರಸನ್ನ ಮನೆಯಲ್ಲಿಯೇ ವಿಷ ಸೇವಿಸಿ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಕಾವ್ಯನೇ ಕಾರಣ ಅಂತ ಸ್ಟೇಟಸ್ ಹಾಕಿಯೇ ಪ್ರಸನ್ನ ಲಮಾಣಿ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ಮಾಸೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಮೃತ ಯುವಕನ ಮಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಹಿರೇಕೇರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ.

Edited By :
PublicNext

PublicNext

14/01/2022 10:44 am

Cinque Terre

54.14 K

Cinque Terre

0