ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳಾ ಪೇದೆ ದರ್ಪ ನೋಡಿ ಹಂಗೈತೆ !

ರೇವಾ:ಮಹಿಳಾ ಪೊಲೀಸ್ ದರ್ಪ ತೋರಿರೋ ಒಂದು ವೀಡಿಯೋ ವೈರಲ್ ಆಗಿದೆ. ಪ್ಯಾಂಟ್‌ ಮೇಲೆ ಕಸ ಎರಚಿದ ವ್ಯಕ್ತಿಗೆ ಪೇದೆ ಕಪಾಳಕ್ಕೆ ಹೊಡೆದು ಆತನಿಂದಲೇ ತನ್ನ ಪ್ಯಾಂಟ್ ಸ್ವಚ್ಛಗೊಳಿಸಿದ ಈ ವೀಡಿಯೋ ಹೆಚ್ಚು ಗಮನ ಸೆಳೆದಿದೆ. ಮಧ್ಯೆ ಪ್ರದೇಶದ ರೇವಾ ಸಿರ್ಮೌರ್‌ ನಲ್ಲಿ ಈ ಘಟನೆ ನಡೆದಿದೆ.

ಆಕಸ್ಮಿಕವಾಗಿಯೇ ಮಹಿಳೆಯ ಮೇಲೆ ವ್ಯಕ್ತಿ ಕಸ ಎರಚಿದ್ದಾನೆ. ಅದರಿಂದ ಕೋಪಗೊಂಡ ಮಹಿಳೆ ತನ್ನ ಪ್ಯಾಂಟ್‌ಅನ್ನೂ ಆ ವ್ಯಕ್ತಿಯಿಂದಲೇ ಸ್ವಚ್ಛಗೊಳಿಸಿಕೊಂಡಿದ್ದಾಳೆ. ಕಪಾಳಕ್ಕೂ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಮುಖಕ್ಕೆ ಬಿಳಿ ದುಪಟ್ಟಾ ಸುತ್ತಿರೋದ್ರಿಂದ ಈ ಮಹಿಳೆಯ ಗುರುತು ಸಿಗೋದಿಲ್ಲ. ಆದರೆ ಈ ಮಹಿಳೆಯನ್ನ

ಗೃಹ ರಕ್ಷಕ ದಳದ ಕಾನ್ಸ್ಬೇಲ್ ಶಶಿಕಲಾ ಎಂದು ಗುರುತಿಸಲಾಗಿದೆ.

ಈ ವಿಚಾರ ಹೆಚ್ಚುವರಿ ಎಸ್‌ಪಿ ಶಿವಕುಮಾರ್‌ ಅವರಿಗೂ ಈ ವಿಷಯ ತಿಳಿದಿದೆ.ದೂರು ಬಂದ್ರೆ ಆಕ್ಷನ್ ತೆಗೆದುಕೊಳ್ಳುತ್ತೇವೆ ಅಂತಲೆ ಎಸ್‌ಪಿ ಶಿವಕುಮಾರ್ ಹೇಳಿದ್ದಾರೆ.

Edited By :
PublicNext

PublicNext

13/01/2022 10:01 am

Cinque Terre

67.21 K

Cinque Terre

4

ಸಂಬಂಧಿತ ಸುದ್ದಿ