ಪುಣೆ: ಮತ್ತೊಂದು ಮದುವೆ ಆಗುತ್ತೇನೆ ಎಂದ ತಂದೆಯನ್ನೇ ಮಗ ಕೊಂದ ಘಟನೆ ಮಹಾರಾಷ್ಟ್ರದ ಪುಣೆಯ ರಾಜಗುರು ನಗರದಲ್ಲಿ ನಡೆದಿದೆ.
ಮರು ವಿವಾಹವಾಗೋ ಆಸೆ ವ್ಯಕ್ತಪಡಿಸಿದ ತಂದೆ ಶಂಕರ್ ರಾಂಭೌ ಬೋರ್ಹಾಡೆ (80) ಎಂಬುವರನ್ನು ಮಗ ಶೇಖರ್ ಬೋರ್ಹಾಡೆ (47) ರುಬ್ಬು ಕಲ್ಲಿನಿಂದ ಹೊಡೆದು ಕೊಲೆಗೈದಿದ್ದಾನೆ. ಶಂಕರ್ ಮರು ಮದುವೆ ಮಾಡಿಕೊಳ್ಳಲು ಮ್ಯಾಟ್ರಿಮೋನಿಯಲ್ಲಿ ಹೆಸರು ನೋಂದಾಯಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಕೋಪಗೊಂಡ ಮಗ ತಂದೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ರುಬ್ಬು ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಆರೋಪಿ ಶೇಖರ್ ತನ್ನ ತಂದೆಯನ್ನು ಕೊಲೆ ಮಾಡಿದ್ದಾಗಿ ಖುದ್ದು ರಾಜಗುರು ಪೊಲೀಸ್ ಠಾಣೆಗೆ ತೆರಳಿ ಒಪ್ಪಿಕೊಂಡಿದ್ದಾನೆ. ಈಗ ಪೊಲೀಸರು ಶೇಖರ್‌ನನ್ನು ಬಂಧಿಸಿದ್ದಾರೆ.
PublicNext
09/01/2022 10:38 pm