ಮೈಸೂರು: ಮೊಬೈಲ್ ಕೆಟ್ಟು ಹೋಗಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಯರಗನಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ.
ಮಹೇಂದ್ರ (22) ನೇಣಿಗೆ ಶರಣಾದ ಯುವಕ. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಮೊಬೈಲ್ ಗೇಮ್ಸ್‌ಗಳಿಗೆ ತುಂಬಾ ಅಡಿಟ್ ಆಗಿದ್ದ ಎನ್ನಲಾಗಿದೆ. ಇತ್ತೀಚಿಗೆ ಮಹೇಂದ್ರನ ಮೊಬೈಲ್ ನೀರಿಗೆ ಬಿದ್ದು ಕೆಟ್ಟು ಹೋಗಿತ್ತು. ಆದರೆ ಅದನ್ನು ರಿಪೇರಿ ಮಾಡಿಸಲು ಆತನ ಬಳಿ ಹಣ ಇರಲಿಲ್ಲ. ಇದರಿಂದ ಬೇಸತ್ತು ಯುವಕ ನೇಣಿಗೆ ಕೊರಳೊಡ್ಡಿದ್ದಾನೆ ಎನ್ನಲಾಗಿದೆ.
ಯುವಕ ಮಹೇಂದ್ರ ತನ್ನ ಮನೆಯ ಪಕ್ಕದಲ್ಲೇ ಇರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
06/01/2022 05:49 pm