ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿ ಬೈದ ಕಾಳಿಚರಣ್ ಅಂದರ್-ದೇಶದ್ರೋಹದ ಕೇಸ್ ದಾಖಲು

ಛತೀಸ್‌ಗಢ್: ಮಹಾತ್ಮಾ ಗಾಂಧಿಯನ್ನ ಮನಬಂದಂತೆ ಬೈದು-ಗಾಂಧಿ ಕೊಂದ ಗೋಡ್ಸೆಯನ್ನ ಹೊಗಳಿದ್ದ ಸಂತ ಕಾಳಿಚರಣ್ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಾಗಿದೆ.

ಮಧ್ಯಪ್ರದೇಶದ ಪೊಲೀಸರು ಈಗಾಗಲೇ ಸಂತ ಕಾಳಿಚರಣ್‌ರನ್ನಬಂಧಿಸಿದ್ದಾರೆ. ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಛತೀಸ್‌ಗಢ್‌ ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ಭಾನುವಾರ ನಡೆದ ಧರ್ಮ ಸಂಸದ್ ನಲ್ಲಿ ಸಂತ ಕಾಳಿಚರಣ್, ಇಡೀ ದೇಶವನ್ನ ಗಾಂಧೀಜಿ ಸರ್ವನಾಶ ಮಾಡಿದ್ದಾರೆ. ಅವರನ್ನ ಕೊಂದ ಗೋಡ್ಸೆಗೆ ನನ್ನ ನಮಸ್ಕಾರ ಅಂತಲೇ ಹೇಳಿಕೆ ಕೊಟ್ಟಿದ್ದರು. ಅದೇ ಈಗ ಕಾಳಿಚರಣ್‌ಗೆ ಕುತ್ತು ತಂದಿದೆ. ಆದರೂ ನಾನು ಮರಣ ದಂಡನೆಗೂ ಸಿದ್ಧ ಅಂತಲೇ ಕಾಳಿಚರಣ್ ಅರೆಸ್ಟ್ ಆಗೋ ಮುಂಚೆ ಹೇಳಿಕೆ ಕೊಟ್ಟಿದ್ದರು.

Edited By :
PublicNext

PublicNext

30/12/2021 05:36 pm

Cinque Terre

69.32 K

Cinque Terre

9