ನೆಲಮಂಗಲ:ಈಗ ಸಿಕ್ಕಿ ಬಿದ್ದ ಮೂವರು ಕಳ್ಳರ ಕಳ್ಳತನದ ಟಾರ್ಗೆಟ್ ವಿಭಿನ್ನವಾಗಿಯೇ ಇದೆ. ಇವರೇ ಬೇರೆ ಇವರ ಟಾರ್ಗೆಟ್ಟೇ ಬೇರೆ. ಹೌದು ಈ ಕಳ್ಳರು ನಿರ್ಮಾಣ ಹಂತದ ಮನೆಗಳಲ್ಲಿಯೇ ಕಳ್ಳತನ ಮಾಡುತ್ತಿದ್ದರು. ಅಲ್ಲಿ ಏನ್ ಕದಿಯುತ್ತಿದ್ದರು ಅಂತಿರೋ. ಬನ್ನಿ,ಹೇಳ್ತಿವಿ.
ಈ ಕಳ್ಳರು ನಿರ್ಮಾಣ ಹಂತದಲ್ಲಿದ್ದ ಮನೆಗಳ ಸೆಂಟ್ರಿಂಗ್ ಶೀಟ್‌ಗಳನ್ನೆ ಕದಿಯುತ್ತಿದ್ದರು. ಇವರಿಗೆ ಇದೇ ಕೆಲಸ. ಬೇರೆ ಕೆಲಸ ಮಾಡದೆ ಹೀಗೆ ನಿರ್ಮಾಣ ಹಂತದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು.
ಬಂಧಿತರನ್ನ ನಂದೀಶ್, ಮುಜು ಮತ್ತು ತನ್ವೀರ್ ಅಂತಲೇ ಗುರುತಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಬಂಧಿತರಿಂದ ಎರಡು ಲಕ್ಷ ಮೌಲ್ಯದ ಸೆಂಟ್ರಿಂಗ್ ಶೀಟ್ ವಶಪಡಿಸಿಕೊಂಡಿದ್ದಾರೆ. ಟಾಟಾ ಏಸ್ ವಾಹವನ್ನ ಕೂಡ ಜಪ್ತಿ ಮಾಡಿದ್ದಾರೆ.
PublicNext
29/12/2021 07:47 am