ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂವರು ಕುಖ್ಯಾತ ಸರಗಳ್ಳರನ್ನ ಬಂಧನ: ಲಕ್ಷ ಮೌಲ್ಯದ ಚಿನ್ನಾಭರಣ ವಶ

ಕಲಬುರಗಿ: ನಗರದಲ್ಲಿ ಸರಗಳ್ಳರ ಹಾವಳು ಹೆಚ್ಚಾಗಿದೆ. ಇದನ್ನ ತಡೆಯಲು ಪೊಲೀಸರು ಭರ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಇದರ ಫಲ ಈಗ ಮೂವರು ಕುಖ್ಯಾತ ಸರಗಳ್ಳರನ್ನ ಬಂಧಿಸಿದ್ದಾರೆ.

ನಿಜಲಿಂಗಪ್ಪ (24), ವಿಠಲ್ (29), ಗುರುದೇವ ಸೇರಿದಂತೆ ಮೂವರು ಸರಗಳ್ಳರ ಪೊಲೀಸರು ಈಗ ಬಂಧಿಸಿದ್ದಾರೆ. ಬಂಧಿತರಿಂದ 11.50 ಲಕ್ಷ ರೂಪಾಯಿ ಮೌಲ್ಯದ 280 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಡಿಸೆಂಬರ್‌ 11 ರಂದು ಜಯನಗರ ಬಡಾವಣೆಯಲ್ಲಿ ಮಹಿಳೆಯ 40 ಗ್ರಾಂನ ಮಾಂಗಲ್ಯ ಸರವನ್ನ ಈ ಗ್ಯಾಂಗ್ ದೋಚಿತ್ತು.

ಎಮ್‌ಬಿ ನಗರದ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ಸರಗಳ್ಳತನದ ಪ್ರಕರಣ ನಡೆದಿದ್ದವು.ಸರಗಳ್ಳರ ಈ ಕೃತ್ಯಗಳು ಸಿಸಿ ಕ್ಯಾಮರಾಗಳಲ್ಲೂ ಸೆರೆಯಾಗಿದ್ದವು.ಅದನ್ನ ಆಧರಿಸಿಯೇ ಪೊಲೀಸರು ತೀವ್ರ ಕಾರ್ಯಾಚರಣೆ ನಡಿಸಿದ್ದರು. ಈಗ ಮೂವರು ಸರಗಳ್ಳರನ್ನ ಬಂಧಿಸಿ ಚಿನ್ನಾಭರಣವನ್ನೂ ವಶಪಡಿಸಿಕೊಂಡಿದ್ದಾರೆ.

Edited By : Shivu K
PublicNext

PublicNext

26/12/2021 12:28 pm

Cinque Terre

80.54 K

Cinque Terre

0

ಸಂಬಂಧಿತ ಸುದ್ದಿ