ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧುರನೊಂದಿಗೆ ಎಸ್ಸೆಸ್ಸೆಲ್ಸಿ ಹುಡುಗಿಯ ಲವ್ ಕಹಾನಿ: ಬೆಟ್ಟದಲ್ಲಿ ಸಿಕ್ಕ ಜೋಡಿ ಶವಗಳು

ರಾಮನಗರ: ಆಕೆ ಇನ್ನೂ ಎಸ್ಸೆಸ್ಸೆಲ್ಸಿ ಓದುವ ಹುಡುಗಿ. ಈತ ಹೆಂಡತಿಯನ್ನು ಕಳೆದುಕೊಂಡ 26ರ ಹರೆಯದ ವಿಧುರ. ಇಬ್ಬರೂ ಪರಿಚಯವಾಗಿ ಹೇಗೋ ಏನೋ ಲವ್ ಶುರುವಾಗಿದೆ. ಕೊನೆಗೆ ಬೆಟ್ಟದ ಪೊದೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಬ್ಬರ ಪ್ರೀತಿ ಕೊನೆಯಾಗಿದೆ.

ಯೆಸ್. ಇಂತದ್ದೊಂದು ಪಾಗಲ್ ಪ್ರೇಮ ಕಥನ ರಾಮನಗರದಲ್ಲಿ ನಡೆ‍ದಿದೆ. ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಬಾಲಕಿ ಕಾವ್ಯ ಹಾಗೂ ಚಾಮುಂಡೇಶ್ವರಿ ನಗರದ ಹರೀಶ್ ಎಂಬಾತರೇ ಆತ್ಮಹತ್ಯೆಗೆ ಶರಣಾದವರು.

ಹರೀಶ್‌ಗೆ ಮದುವೆಯಾಗಿ ಹೆಂಡತಿ ತೀರಿ ಹೋಗಿದ್ದಳು. ಈತನಿಗೆ ಒಂದು ಮಗು ಕೂಡ ಇತ್ತು. ಆದರೂ ಬಾಲಕಿ ಕಾವ್ಯ ಹರೀಶನ ಮೋಹದ ಸುಳಿಯಲ್ಲಿ ಸಿಲುಕಿದ್ದಳು. ಈ ಪಾಗಲ್ ಪ್ರೇಮಕ್ಕೆ ಮನೆಯವರಿಂದ ವಿರೋಧ ಇತ್ತು. ಅದೆಷ್ಟೇ ತಿಳಿಸಿ ಹೇಳಿದರೂ ಮಗಳು ನನಗೆ ಅವನೇ ಬೇಕು ಎಂದು ವಾದಿಸಿದ್ದಳು. ಕೊನೆಗೆ ಮನೆಯವರಿಂದ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾದಾಗ ಇಬ್ಬರೂ ರಾಮನಗರ ಜಿಲ್ಲೆ ರಾಮದೇವರಬೆಟ್ಟಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ಗಟ್ಟಿ ನಿರ್ಧಾರ ತಳೆದಿದ್ದ ಪ್ರೇಮಿಗಳು, ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ 'RIP' ಎಂದು ಬರೆದುಕೊಂಡಿದ್ದಾರೆ. ಈ ಸ್ಟೇಟಸ್ ನೋಡಿದ ಹರೀಶ್ ಸ್ನೇಹಿತರು ಅದರ ಲೋಕೇಶನ್ ಜಾಡು ಹಿಡಿದು ಪೊಲೀಸರ ಸಹಾಯದಿಂದ ಜೋಡಿ ಆತ್ಮಹತ್ಯೆ‌ ಮಾಡಿಕೊಂಡ ಸ್ಥಳ‌ ಪತ್ತೆ ಹಚ್ಚಿದ್ದಾರೆ. ಸಾಯುವ ಮುನ್ನ‌ ಹರೀಶನು ತನ್ನ ಪ್ರಿಯತಮೆ ಕಾವ್ಯಾಳಿಗೆ ತಾಳಿ ಕಟ್ಟಿದ್ದಾನೆ. ಮೃತದೇಹ ತೆಗೆದ ಪೊಲೀಸರು ಶವ ಪರೀಕ್ಷೆ ನಡೆಸಿ ವಾರಸುದಾರಿಗೆ ಒಪ್ಪಿಸಿದ್ದಾರೆ.

Edited By : Nagaraj Tulugeri
PublicNext

PublicNext

23/12/2021 12:09 pm

Cinque Terre

51.72 K

Cinque Terre

19