ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಇಲ್ಲ ರಕ್ಷಣೆ: ಮಹಿಳೆಯರೇ ಎಚ್ಚರ... ಹೆಚ್ಚಿರುವ ಪುಂಡರ ಹಾವಳಿ

ಗದಗ: ಮಹಿಳೆಯರೇ ಎಚ್ಚರ... ಎಚ್ಚರ... ಏನಿದು ಪಬ್ಲಿಕ್ ನೆಕ್ಸ್ಟ್ ಈ ರೀತಿ ಮಹಿಳೆಯರಿಗೆ ಎಚ್ಚರಿಕೆ ಕೊಡುತ್ತಿದೆ ಅಂದುಕೊಂಡ್ರಾ... ಅರೇ ಇದೇ ಸ್ವಾಮಿ ವಿಷಯ... ಮುದ್ರಣಕಾಶಿ ಗದಗನಲ್ಲಿ ರಾತ್ರಿ ಆದರೆ ಸಾಕು ಮಹಿಳೆಯರು ಭಯದಿಂದಲೇ ಓಡಾಡಬೇಕಿದೆ. ಏನಿದು ಅಂತೀರಾ ತೋರಸ್ತೀವಿ ನೋಡಿ...

ಕೆಲಸಕ್ಕೆ ಎಂದು ಗದಗ ಸುತ್ತಮುತ್ತಲಿನ ಗ್ರಾಮಗಳಿಂದ ಗದಗಿಗೆ ಬರುವ ಮಹಿಳೆಯರು ಬಸ್ ಹತ್ತಲು ಹೊಸ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಆದರೆ ಹೊಸ ಬಸ್ ನಿಲ್ದಾಣದಲ್ಲಿ ಮಾತ್ರ ಯಾವುದೇ ರೀತಿಯಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ. ಸಂಜೆ ಆದರೆ ಸಾಕು ಪುಂಡ ಪೋಕರಿಗಳ ಹಾವಳಿ ಮಿತಿ ಮೀರಿದೆ. ಮಹಿಳೆಯರು ಭಯದಲ್ಲಿಯೇ ಓಡಾಡಬೇಕಿದೆ. ಅಲ್ಲದೇ ನಿನ್ನೆ ಸಂಜೆಯ ವೇಳೆಯಲ್ಲಿ ಮಹಿಳೆಯೊಬ್ಬರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆ ಇದೇ ಗದಗ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

ಇನ್ನೂ ವಿಪರ್ಯಾಸಕರ ಸಂಗತಿ ಎಂದರೆ ದೂರು ನೀಡಲು ಬಸ್ ನಿಲ್ದಾಣದ ಪೊಲೀಸ್ ಚೌಕಿಗೆ ಬಂದರೇ ಸಿಬ್ಬಂದಿಯೇ ಇಲ್ಲ. ಅಲ್ಲದೇ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಪೋನ್ ಮಾಡಿದರೇ ಸ್ವಚ್ ಆಫ್ ಆಗಿದೆ. ಗದಗ ಹೊಸ ಬಸ್ ನಿಲ್ದಾಣದಲ್ಲಿ ಒಂದಲ್ಲಾ ಎರಡಲ್ಲ ಹತ್ತು ಹಲವು ಸಮಸ್ಯೆಗಳು ತಲೆದೂರಿದ್ದು, ಯಾರೊಬ್ಬರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಕೊನೆಯ ವೇಳೆಯಲ್ಲಿ ಬಂದ ಪೊಲೀಸ್ ಸಿಬ್ಬಂದಿಯೊಬ್ಬರು ಸಮಸ್ಯೆ ಆಲಿಸುವ ಸೌಜನ್ಯವನ್ನು ಸಹ ತೋರದೇ ಇರುವುದು ನಿಜಕ್ಕೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚೇತ್ತುಕೊಂಡು ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ.

Edited By : Shivu K
PublicNext

PublicNext

21/12/2021 01:00 pm

Cinque Terre

49.82 K

Cinque Terre

2