ನವದೆಹಲಿ:ಬಾಲಿವುಡ್ ನಟಿ ಐಶ್ವರ್ಯ ರೈ ಅವರನ್ನ ಜಾರಿ ನಿರ್ದೇಶನಾಲಯ (ಇ.ಡಿ) ಸತತ 5 ಗಂಟೆ ವರೆಗೂ ವಿಚಾರಣೆ ನಡೆಸಿದೆ.
ಪನಾಮಾ ಪೇಪರ್ಸ್ ಸೋರಿಕೆ ಸಂಬಂಧಿಸಿದಂತೆ ಇ.ಡಿ ಐಶ್ವರ್ಯ ರೈಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.ಅದರಂತೆ ದೆಹಲಿಯ ಇಂಡಿಯಾ ಗೇಟ್ ಬಳಿಯ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಸತತ 5 ಗಂಟಗಳ ಕಾಲ ಐಶ್ವರ್ಯ ರೈ ವಿಚಾರಣೆ ನಡೆದಿದೆ.
ವಿಚಾರಣೆ ಬಳಿಕ ಐಶ್ವರ್ಯ ರೈ ಮಾಧ್ಯಮಕ್ಕೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಮತ್ತೆ ಐಶ್ವರ್ಯ ರೈಗೆ ಸಮನ್ಸ್ ನೀಡಲಾಗುವ ಬಗ್ಗೆ ಅಧಿಕಾರಿಗಳೂ ಯಾವುದೇ ರೀತಿಯ ಮಾಹಿತಿ ನೀಡಿಯೇ ಇಲ್ಲ.
ಇ.ಡಿ ಈ ವಿಚಾರಣೆಗೆ ಐಶ್ವರ್ಯ ರೈ ಅತ್ತೆ ಜಯಾ ಬಚ್ಚನ್ ಫುಲ್ ಗರಂ ಆಗಿದ್ದಾರೆ. ಇ.ಡಿ ವಿಚಾರಣೆಯನ್ನ ತೀವ್ರವಾಗಿಯೇ ಖಂಡಿಸಿದ್ದಾರೆ.
PublicNext
21/12/2021 08:48 am