ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಿದು ಲಾರಿ ಓಡಿಸಿ ಬೈಕ್‌ಗೆ ಡಿಕ್ಕಿ-ಮಕ್ಕಳಿಬ್ಬರ ಸಾವು-ತಂದೆ ಗಂಭೀರ-ತಾಯಿ ಮರಣ

ಹಾಸನ: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ಹಾಸನದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪ್ರಣತಿ(3) ಪ್ರಣವ್(3) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಕುಡಿದ ಮತ್ತಿನಲ್ಲಿ ಬೈಕ್ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಲಾರಿ ಟಯರ್ ನಲ್ಲಿ ಮಗುವಿನ ದೇಹ ಸಿಲುಕಿಕೊಂಡು ಸುಮಾರು ಮೂರು ಕಿಲೋಮೀಟರ್ ನಷ್ಟು ದೂರ ಹೋಗಿದೆ.

ಹಾಸನದ ಗವೇನಹಳ್ಳಿ ತಾಯಿ ಜ್ಯೋತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಂದೆ ಶಿವಾನಂದ್ ಸ್ಥಿತಿ ಗಂಭೀರವಗಿದೆ. ಪಾನ ಮತ್ತನಾಗಿ ಲಾರಿ ಚಲಾಯಿಸಿದ್ದ ಡ್ರೈವರ್, ಎಸ್ಕೇಪ್‌ ಆಗುತ್ತಿದ್ದನ್ನ ಕಂಡ ಸಾವರ್ಜನಿಕರು ಹಿಡಿದಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಭೀಕರ ಘಟನೆ ನಡೆದಿದೆ.

Edited By :
PublicNext

PublicNext

20/12/2021 12:44 pm

Cinque Terre

50.88 K

Cinque Terre

3

ಸಂಬಂಧಿತ ಸುದ್ದಿ