ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣಕ್ಕೆ ಬೇಡಿಕೆ ಇಟ್ಟ ವರನಿಗೆ ಮದುವೆ ಮನೆಯಲ್ಲೇ ಥಳಿತ

ಉತ್ತರ ಪ್ರದೇಶ : ಮದುವೆಯ ದಿನವೇ ವರ, ವಧುವಿನ ಸಂಬಂಧಿಕರು ಹಾಗೂ ಮದುವೆಗೆ ಬಂದ ಅತಿಥಿಗಳಿಂದ ಹೊಡೆತ ತಿಂದ ವೀಡಿಯೋವೊಂದು ಇದೀಗ ವೈರಲ್‌ ಆಗ್ತಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆ. ಮದುವೆ ಮುಹೂರ್ತಕ್ಕೆ ಇನ್ನೇನು ಸ್ವಲ್ಪ ಹೊತ್ತು ಬಾಕಿ ಇರುವಾಗ, ವರ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಾತಿಗೆ ಮಾತು ಬೆಳೆದ ಕೊನೆಗೆ ಸಿಟ್ಟಾದ ವಧುವಿನ ಕಡೆಯವರು ವರನಿಗೆ ಚೆನ್ನಾಗಿ ಬಾರಿಸಿದ್ದಾರೆ. ಮದುವೆಗೆ ಬಂದಿದ್ದ ಅತಿಥಿಯೊಬ್ಬರು ಈ ಸನ್ನಿವೇಶವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು ಭಾರೀ ವೈರಲ್‌ ಆಗಿದೆ.

Edited By : Shivu K
PublicNext

PublicNext

18/12/2021 06:58 pm

Cinque Terre

50.04 K

Cinque Terre

3

ಸಂಬಂಧಿತ ಸುದ್ದಿ