ಬೀದರ್:ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 456 ಕೆಜಿ ಗಾಂಜಾವನ್ನು ಬೀದರ್ ಪೊಲೀಸರು ವಶಪಡಿಸಿಕೊಂಡು ನಾಲ್ವರನ್ನ ಬಂಧಿಸಿದ್ದಾರೆ.
ತೆಲಂಗಾಣದ ವಿಶಾಖಪಟ್ಟಣದಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಮೂರು ಕಾರುಗಳಲ್ಲಿ ಗಾಂಜಾ ಸಾಗಾಟ ನಡೆದಿದೆ.
ಬೀದರ ಎಸ್.ಪಿ ಡಿ.ಎಲ್ ನಾಗೇಶ ಅವರ ಮಾರ್ಗದರ್ಶನದಲ್ಲಿ ಹುಮನಾಬಾದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್‌ಐ ರವಿಕುಮಾರ ನಾಯ್ಕೋಡಿ ಅವರ ಸಹಯೋಗದಿಂದ, ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಿ 22.80 ಲಕ್ಷ ಮೌಲ್ಯದ 456 ಕೆಜಿ ಗಾಂಜಾ, 9 ಲಕ್ಷದ ಮೂರು ಕಾರುಗಳು, 10,250 ನಗದು ಹಣ ಜಪ್ತಿಮಾಡಿದ್ದಾರೆ.
ಘಟನೆಯ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/12/2021 07:15 pm