ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಮಹಿಳೆಯ ಅನುಮಾನಾಸ್ಪದ ಸಾವು: ಲಕ್ಷಾಂತರ ಮೌಲ್ಯದ ಒಡವೆ, ನಗದು ನಾಪತ್ತೆ

ಹಾಸನ: ಒಂಟಿ‌ಯಾಗಿ ವಾಸಿಸುತ್ತಿದ್ದ ಮಹಿಳೆಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಅರಕಲಗೂಡು ತಾಲ್ಲೂಕಿನ ಕೊರಟಗೆರೆ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಮ್ಮ(65) ಮೃತ ಮಹಿಳೆ. ಮಹಿಳೆಯನ್ನು ಕೊಂದು ಲಕ್ಷಾಂತರ ಮೌಲ್ಯದ ಒಡವೆ, ನಗದು ದೋಚಿರೋ ಶಂಕೆವ್ಯಕ್ತವಾಗುತ್ತಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಐದು ತಿಂಗಳ ಹಿಂದೆ ಪತಿ ಮೃತಪಟ್ಟಿದ್ದರಿಂದ ಒಂಟಿಯಾಗಿಯೇ ಮಹಿಳೆ ವಾಸವಾಗಿದ್ದರು.ರಾತ್ರಿ ಪುತ್ರಿ ಜೊತೆಗೆ ಫೋನಿನಲ್ಲಿ ಮಾತನಾಡಿದ್ದ ಮಹಿಳೆ ಬೆಳಗಾಗೋ ಅಷ್ಟರಲ್ಲಿ ಕೊಲೆಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

Edited By : Nagaraj Tulugeri
PublicNext

PublicNext

16/12/2021 11:58 am

Cinque Terre

24.69 K

Cinque Terre

0

ಸಂಬಂಧಿತ ಸುದ್ದಿ