ಉತ್ತರಪ್ರದೇಶ: ಸರ್ಕಾರದ ಸೌಲಭ್ಯಗಳನ್ನ ಪಡೆಯಲೆಂದೇ ಅಣ್ಣನೊಬ್ಬ ಸರ್ಕಾರ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ತಂಗಿಗೇನೆ ತಾಳಿಕಟ್ಟಿ ಸಿಕ್ಕಿ ಬಿದ್ದಿದ್ದಾನೆ.
ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ಫಿರೋಜಾಬಾದ್ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಆಯೋಜನೆ ಆಗಿತ್ತು. 51 ಜೋಡಿಗಳಲ್ಲಿ ಅಣ್ಣ-ತಂಗಿ ಜೋಡಿ ಕೂಡ ಇತ್ತು. ಮದುವೆ ಆದ್ಮೇಲೆ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಸಾಮೂಹಿಕ ಮದುವೆ ಆದರೆ ಸರ್ಕಾರ ಗೃಹಪಯೋಗಿ ವಸ್ತುಗಳನ್ನ ಮತ್ತು ಬಟ್ಟೆಗಳನ್ನೂ ಕೊಡುತ್ತದೆ. ಇದರ ಆಸೆಗಾಗಿಯೇ ತಂಗಿಗೆ ತಾಳಿಕಟ್ಟಿದ್ದಾನೆ ಈ ಹುಚ್ಚು ಸಹೋದರ. ಸದ್ಯ ಸಹೋದರ ನಾಗಲಾ ಪ್ರೇಮ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
PublicNext
15/12/2021 07:02 pm