ವಿಜಯಪುರ: ಯುವಕನ ಜೊತೆ ವಾಸವಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಅಪ್ರಾಪ್ತ ವಿದ್ಯಾರ್ಥಿನಿಯು ಸಂಜು ಹುಲ್ಲೂರ ಎಂಬ ಯುವಕನೊಂದಿಗೆ ವಿಶ್ವೇಶ್ವರ ನಗರದ ಮನೆಯಲ್ಲಿ ವಾಸವಿದ್ದಳು. ಆದರೆ ಶನಿವಾರ ಅಚಾನಕ್ಕಾಗಿ ವಿದ್ಯಾರ್ಥಿನಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿನಿ ಜೊತೆಗಿದ್ದ ಸಂಜು ವಿಜಯಪುರ ನಗರದ ಹೊರ ಭಾಗದ ಯೋಗಾಪುರ ಕಾಲೋನಿಯ ನಿವಾಸಿ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಸಂಜುನನ್ನು ಈ ವಿದ್ಯಾರ್ಥಿನಿ ಪ್ರೀತಿಸುತ್ತಿದ್ದಳು ಎಂಬ ಶಂಕೆಯೂ ಸಹ ವ್ಯಕ್ತವಾಗುತ್ತಿದೆ. ಅದು ಅಲ್ಲದೇ ಸಂಜು ಹುಲ್ಲೂರ ವಿದ್ಯಾರ್ಥಿನಿಯನ್ನು ದೈಹಿಕವಾಗಿ ಬಳಸಿಕೊಂಡು ಕೊಲೆಗೈದು ನೇಣಿಗೆ ಹಾಕಿದ್ದಾನೆ ಎಂದು ವಿದ್ಯಾರ್ಥಿನಿ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಜಾರಾ ಸಮುದಾಯದವರು ನಗರದ ಗಾಂಧಿಚೌಕ್ ಬಳಿ ವಿದ್ಯಾರ್ಥಿನಿ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
PublicNext
12/12/2021 12:58 pm