ಅಮರಾವತಿ: ಗಂಡು ಮಗುವಿನ ವ್ಯಾಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು 4 ವರ್ಷಗಳಲ್ಲಿ ತನ್ನ 3 ನವಜಾತ ಹೆಣ್ಣು ಶಿಶುಗಳನ್ನು ಕೊಂದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಇಂತಹ ಹೇಯ ಕೃತ್ಯ ಎಸಗಿದ ಮಹಿಳೆಯನ್ನು ಬೊಂಟ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಆರೋಪಿ ಮಹಿಳೆ ಬೊಂಟ ಲಕ್ಷ್ಮಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಬೊಂಟ ಲಕ್ಷ್ಮಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅವಳು ಗಂಡು ಮಗುವನ್ನು ಹೊಂದುವುದಕ್ಕಾಗಿ ಇಂತ ಹೇಯಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯು ಡಿಸೆಂಬರ್ 2ರಂದು ಜನಿಸಿದ ತನ್ನ ಮೂರನೇ ಹೆಣ್ಣು ಮಗುವನ್ನು ಕೊಂದ ನಂತರ ಹಳೆಯ ಕೃತ್ಯ ಬೆಳಕಿಗೆ ಬಂದಿವೆ.
PublicNext
11/12/2021 06:44 pm