ಬೆಳಗಾವಿ : ಟ್ರಾಫಿಕ್ ಪೊಲೀಸ್ ಹಾಗೂ ಬಸ್ ಕಂಡಕ್ಟರ್ ಬಡಿದಾಡಿಕೊಂಡ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿಂದು ನಡೆದಿದೆ.
ಸರ್ಕಲ್ ನಲ್ಲಿ ಬಸ್ ನಿಲ್ಲಿಸಿದ್ದಕ್ಕಾಗಿ ಟ್ರಾಫಿಕ್ ಪೊಲೀಸ್ ಹಾಗೂ ಕಂಡಕ್ಟರ್ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಇಬ್ಬರು ತಾಳ್ಮೆ ಕಳೆದುಕೊಂಡಿದ್ದಾರೆ.
ಈ ವೇಳೆ ಟ್ರಾಫಿಕ್ ಪೊಲೀಸ್ ಕಂಡಕ್ಟರ್ ಕೆನ್ನೆಗೆ ಭಾರಿಸಿದ್ದಾರೆ. ಇನ್ನು ಸಾರ್ವಜನಿಕ ಸ್ಥಳದಲ್ಲಿ ಸರ್ಕಾರಿ ನೌಕರರಿಬ್ಬರು ಪರಸ್ಪರ ಕೈ ಕೈ ಮಿಲಾಯಿಸಿರುವ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ.
PublicNext
08/12/2021 12:29 pm