ಬೆಂಗಳೂರು : ಬೆಂಗಳೂರಿನಲ್ಲಿ ಹಾಡಹಗಲೇ ರೌಡಿಶೀಟರ್ ಮೇಲೆ ಗುಂಪೊಂದು ಅಟ್ಯಾಕ್ ಮಾಡಿದೆ. ಆದ್ರೆ ಕೂದಲೆಳೆ ಅಂತರದಿಂದ ನಟೋರಿಯಸ್ ರೌಡಿಶೀಟರ್ ಬಜಾವ್ ಆಗಿದ್ದಾರೆ.
ಹೌದು ಹುಳಿಮಾವು ಠಾಣೆ ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಹಾಡಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಹೊಂಚು ಹಾಕಿ ಅಟ್ಯಾಕ್ ಮಾಡಲಾಗಿದೆ.
ನಾಲ್ಕೈದು ಜನ ದುಷ್ಕರ್ಮಿಗಳ ಗ್ಯಾಂಗ್ ಹತ್ಯೆಗೆ ಹೊಂಚು ಹಾಕಿ ಜೆಸಿಬಿ ನಾರಾಯಣ ಕಾರು ಅಡ್ಡಗಟ್ಟಿದ್ದ ಗ್ಯಾಂಗ್ ಹಲ್ಲೆಗೆ ಯತ್ನಿಸಿದೆ. ಇನ್ನು ದುಷ್ಕರ್ಮಿಗಳ ಚಲನವಲನದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುಳಿಮಾವು ಠಾಣಾ ವ್ಯಾಪ್ತಿಯ ಡಿಎಲ್ ಎಫ್ ರಸ್ತೆಯಲ್ಲಿ ಘಟನೆ ನಡೆದಿದೆ. ಮಚ್ಚು-ಲಾಂಗ್ ಹಿಡಿದು ಕಾರಿನಿಂದ ಇಳಿದು ಅಡ್ಡಗಟ್ಟುತ್ತಿದ್ದಂತೆ ಎಚ್ಚೆತ್ತ ರೌಡಿಶೀಟರ್ ಕಾರು ರಿವರ್ಸ್ ಚಲಾಯಿಸಿ ಕೂದಲೆಳೆ ಅಂತರದಲ್ಲಿ ಎಸ್ಕೇಪ್ ಆಗಿದ್ದಾರೆ.
ಇನ್ನು ಸ್ಕೆಚ್ ಮಿಸ್ ಆಗುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ.
ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯವಾಳಿ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
PublicNext
08/12/2021 11:06 am