ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳ್ಳನ ಕೈಚಳಕ : ಕೈ ಮುಗಿದು ಮೂರ್ತಿ ಕದ್ದ ಚೋರ

ಬೆಳಗಾವಿ : ಸಾಮಾನ್ಯರಂತೆ ದೇವಾಲಯಕ್ಕೆ ಎಂಟ್ರಿ ಕೊಟ್ಟ ಕಳ್ಳ ದೇವರಿಗೆ ಕೈ ಮುಗಿದು ನಮಸ್ಕರಿಸಿ ಬಳಿಕ ಅದೇ ಮೂರ್ತಿಯನ್ನು ಎಗರಿಸಿ ಎಸ್ಕೇಪ್ ಆದ ಘಟನೆ ಕುಂದಾ ನಗರಿ ಬೆಳಗಾವಿಯಲ್ಲಿ ನಡೆದಿದೆ.

ಹೌದು ಬೆಳಗಾವಿ ನಗರ ಪಾಂಗುಳಗಲ್ಲಿಯಲ್ಲಿರುವ ದಕ್ಷಿಣ ಭಾರತದ ಏಕೈಕ ಅಶ್ವತ್ಥಾಮ ದೇವಾಲಯದಲ್ಲಿ ಮೂರ್ತಿ ಕಳ್ಳತನವಾಗಿದೆ. ಇನ್ನು ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸರೆಯಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸದ್ಯ ಅಶ್ವಥಾಮ ಮೂರ್ತಿ ಕಳ್ಳತವಾಗಿರುವುದು ಭಕ್ತಗಣದಲ್ಲಿ ಆತಂಕ ಮನೆ ಮಾಡಿದೆ.

Edited By : Shivu K
PublicNext

PublicNext

08/12/2021 10:18 am

Cinque Terre

62.29 K

Cinque Terre

1

ಸಂಬಂಧಿತ ಸುದ್ದಿ