ಕೋಹಿಮಾ: ನಾಗಾಲ್ಯಾಂಡ್ ನ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಸೇನೆಯ 21 ಪ್ಯಾರಾ ವಿಶೇಷ ಪಡೆ ಮೇಲೆ ನಾಗಾಲ್ಯಾಂಡ್ ಪೊಲೀಸರು ಸೋಮವಾರ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಪ್ಯಾರಾ ವಿಶೇಷ ಪಡೆಯ ಕಾರ್ಯಾಚರಣೆಯಲ್ಲಿ ನಾಗಾಲ್ಯಾಂಡ್‌ನ 14 ಜನ ನಾಗರಿಕರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದನ್ನ ಕಂಡಿಸಿ ಬುಡಕಟ್ಟು ಸಂಸ್ಥೆಗಳು ಪ್ರತಿಭಟನೆಯನ್ನೂ ಮಾಡುತ್ತಿವೆ.
ಆದರೆ ಈ ಗುಂಡಿನ ದಾಳಿಯ ಕೂಲಂಕಷವಾಗಿಯೇ ಪರಿಶೀಲನೆ ನಡೆಸಿರೋ ಪೊಲೀಸರು ಈಗ ಪ್ಯಾರಾ ವಿಶೇಷ ಪಡೆ ವಿರುದ್ಧ ಕೊಲೆ ಪ್ರಕರಣವನ್ನ ದಾಖಲಿಸಿದ್ದಾರೆ.
PublicNext
06/12/2021 05:15 pm