ಹೈದ್ರಾಬಾದ್:ದುಡ್ಡಿಗಾಗಿ ಗೆಳೆಯನನ್ನೆ ಕೊಂದ ಗೆಳೆಯ. ಚಾಕುವಿನಿಂದ ಕೊಂದ ಗೆಳೆಯನ್ನ ಬಾತ್ ರೂಮ್‌ನಲ್ಲಿ ಸುಟ್ಟುಹಾಕಲು ಪಯತ್ನಿಸಿ ಪರಾರಿಯಾದ ಸ್ನೇಹಿತ. ಹೌದು ಈ ಘಟನೆ ನವೆಂಬರ್-24 ರಂದು ಹೈದ್ರಾಬಾದ್ ನಲ್ಲಿ ನಡೆದಿದೆ. ಬನ್ನಿ, ಹೇಳ್ತಿವಿ ಇತರ ಡಿಟೈಲ್ಸ್.
ನಾಗಪವನ್ ಮತ್ತು ನಾಗಸಾಯಿ ಇಬ್ಬರೂ ಸ್ನೇಹಿತರೇ. ಖರ್ಚಿನ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಆ ಜಗಳ ತಾರಕಕ್ಕೇರಿದೆ.ನಾಗಪವನ್ ಗೆಳೆಯ ನಾಗಸಾಯಿಗೆ ಚಾಕುವಿನಿಂದ ಹೊಟ್ಟೆ ಮತ್ತು ಕತ್ತಿಗೆ ಇರಿದಿದ್ದಾನೆ.ಇದರಿಂದ ನಾಗಸಾಯಿ ಸ್ಥಳದಲ್ಲಿಯೇ ಸತ್ತು ಹೋಗಿದ್ದಾನೆ.
ಡಿಸೆಂಬರ್-03 ರಂದು ನಾಗಪವನ್ ಮತ್ತೊಬ್ಬ ಗೆಳೆಯನ್ನ ಕರೆದುಕೊಂಡು ಬಂದು ನಾಗಸಾಯಿ ಶವವನ್ನ ಸುಡಲು ಪ್ರಯತ್ನಿಸಿದ್ದಾನೆ. ಆದರೆ ದುರ್ವಾಸನೆ ಬಂದು ಅಕ್ಕ-ಪಕ್ಕದವ್ರು ಏನಾಗಿದೆ ಅಂತಲೂ ಕೇಳಿದ್ದಾರೆ. ಹಂದಿ ಸತ್ತು ಹೋಗಿದೆ ಅಂತಲೇ ನಾಗಪವನ್ ಹೇಳಿ ಸ್ನೇಹಿತನ ಸಮೇತ ಪರಾರಿ ಆಗಿದ್ದಾನೆ.
ಅಕ್ಕ-ಪಕ್ಕದವರು ರಾಜನಗರ ಪೊಲೀಸರಿಗತೆ ಮಾಹಿತಿಕೊಟ್ಟಿದ್ದಾರೆ. ದುಶ್ಚಟದ ದಾಸರೂ ಆಗಿದ್ದರು ಈ ಯುವಕರು ಅಂತಲೂ ದೂರಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ. ಪರಾರಿಯಾದ ನಾಗಪವನ್ ಮತ್ತು ಸ್ನೇಹಿತನನ್ನ ಅರೆಸ್ಟ್ ಮಾಡುವುದಾಗಿಯೇ ಪೊಲೀಸರು ತಿಳಿಸಿದ್ದಾರೆ.
PublicNext
06/12/2021 12:20 pm