ವಿಜಯಪುರ : ದೆಹಲಿಯ ಸೇನಾ ಕ್ಯಾಂಪಿನಲ್ಲಿ ವಿಜಯಪುರ ಜಿಲ್ಲೆಯ ಯೋಧ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೇನಾ ಕ್ಯಾಂಪ್ ಆವರಣದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಮಂಜುನಾಥ ಹೂಗಾರ್ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಸೇನಾ ತರಬೇತಿ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದ ಮಂಜುನಾಥ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸೇನಾ ಕ್ಯಾಂಪ್ ಅಧಿಕಾರಿಗಳಿಂದ ಮಂಜುನಾಥ್ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.
ನಾಡಿದ್ದು ಸ್ವ ಗ್ರಾಮಕ್ಕೆ ಯೋಧನ ಶವ ಆಗಮಿಸೋ ಸಾಧ್ಯತೆ ಇದೆ. ಸದ್ಯ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
PublicNext
05/12/2021 07:22 pm