ವಿಜಯಪುರ : ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದಲ್ಲಿ ಬಾಲಾಜಿ ಬಾರ್ ಹಾಗೂ ಗಾಯಿತ್ರಿ ವೈನ್ ಶಾಪ್ ನಲ್ಲಿ ಕಳ್ಳತನವಾಗಿದೆ. ಮದ್ಯ ರಾತ್ರಿ 1 ಗಂಟೆ ಸುಮಾರಿಗೆ ಬಾರ್ ಹಾಗೂ ವೈನ್ ಶಾಪ್ ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಕೈಚಳಕ ತೋರಿ ಪರಾರಿಯಾಗಿದ್ದಾರೆ.
ಕ್ಯಾಶ್ ಬಾಕ್ಸ್ ನಲ್ಲಿದ್ದ ನಾಲ್ಕು ಸಾವಿರ ನಗದು ಸೇರಿದಂತೆ ಕೆಲ ಮದ್ಯದ ಬಾಟಲ್ ಹಾಗೂ ಬಿಯರ್ ಬಾಟಲ್ ಎಗರಿಸಿದ ಕಳ್ಳರು ಎಸ್ಕೇಪ್ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಕಳ್ಳತನ ಕಾರ್ಯದಲ್ಲಿಯೂ ಕೋವಿಡ್ ರೂಲ್ಸ್ ಫಾಲೋ ಮಾಡಿದ ಖದೀಮರು ಮುಖಕ್ಕೆ ಮಾಸ್ಕ ಹಾಕಿ ಕೃತ್ಯ ಎಸಗಿದ್ದಾರೆ.
ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
04/12/2021 03:13 pm