ಚಿಕ್ಕಮಗಳೂರು: ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿದ್ದಕ್ಕೆ ಧರ್ಮಗುರು ಮೇಲೆ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಕ್ಮಲ್ ಮತ್ತು ಅವನ ಬೆಂಬಲಿಗರಿಂದ ಮುಸ್ಲಿಂ ಧರ್ಮಗುರು ಮೇಲೆ ಹಲ್ಲೆ ಆರೋಪವಿದ್ದು ಅಕ್ಮಲ್ ವಿರುದ್ಧ ಬಸವನಹಳ್ಳಿ ಠಾಣೆಯಲ್ಲಿ ಧರ್ಮಗುರುಗಳಿಂದ ದೂರು ದಾಖಲಾಗಿದೆ.
ಆಂಜನೇಯನ ಮಂಗಳಾರತಿ ಪಡೆದಿದ್ದಕ್ಕೆ ಅಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾ ಮಾಡಿದ್ದರು ಎನ್ನುವುದು ಅಕ್ಮಲ್ ಆರೋಪ.
ಮಸೀದಿ ಅಧ್ಯಕ್ಷ ಸ್ಥಾನ, ಬೋರ್ಡ್ ಆಫ್ ಟ್ರಸ್ಟ್ ಮುಸ್ಲಿಂ ಎಂಡೋಲ್ಮೆಂಟ್ ಸಂಘದಿಂದಲೂ ಯಾವುದೇ ನೋಟೀಸ್ ನೀಡದೆ, ನನ್ನ ಗಮನಕ್ಕೂ ತಾರದೆ ಪದಚ್ಯುತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಘದ ಬೈಲಾದಲ್ಲಿ ಸರ್ವಧರ್ಮ ಒಂದೇ ಎಂದು ಇದೆ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಪಿತೂರಿ ಮಾಡಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದಾರೆ ಎಂದು ಗುರುಗಳ ನಡೆಗೆ ಆಕ್ರೋಶಿತರಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ
PublicNext
02/12/2021 05:52 pm