ಚೆನ್ನೈ: 25 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳುನಾಡಿನ ಮಧುರೈನಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಬಂಧಿಸಲಾಗಿದೆ.
ಮಹಿಳೆಯು ತನ್ನ ಸಹದ್ಯೋಗಿಗಳ ಜೊತೆಗೆ ಸಿನಿಮಾ ನೋಡಿ ಮನೆಗೆ ವಾಪಸಾಗುತ್ತಿದ್ದಳು. ಈ ವೇಳೆ ಆರೋಪಿ ಕಾನ್‌ಸ್ಟೆಬಲ್ ಮುರುಗನ್ ಸೇರಿದಂತೆ ಇಬ್ಬರು ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಮುರುಗನ್ ಮಹಿಳೆಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಒಂದು ವೇಳೆ ಸೆಕ್ಸ್‌ಗೆ ಸಹಕಾರ ನೀಡದಿದ್ದರೆ, ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ವೇಶ್ಯಾವಾಟಿಕೆ ಕೇಸ್ ಹಾಕುವುದಾಗಿ ಮುರುಗನ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
PublicNext
01/12/2021 09:43 pm