ಮುಂಬೈ: ವಿಚ್ಛೇದನ ನೀಡಲು ನಿರಾಕರಿಸಿದ್ದಕ್ಕಾಗಿ ಪತಿಯೋರ್ವ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಮುಖಕ್ಕೆ ಹೊಡೆದು ಆಕೆಯ ಹಲ್ಲು ಮುರಿದ ಘಟನೆ ಮಹಾರಾಷ್ಟ್ರದ ಪುಣೆಯ ವಿಮಾನ್ ನಗರದಲ್ಲಿ ನಡೆದಿದೆ.
ಆರೋಪಿಯು 34 ವರ್ಷದವನಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರ ಪ್ರಕಾರ, ದಂಪತಿಯು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ಸೊಲ್ಲಾಪುರ ಜಿಲ್ಲೆಗೆ ಸೇರಿದವಳು. ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರ ನಡುವೆ ವಿಚ್ಛೇದನ ಪ್ರಕರಣ ನಡೆಯುತ್ತಿತ್ತು. ನವೆಂಬರ್ 27ರಂದು ಇಬ್ಬರನ್ನೂ ಕೌನ್ಸೆಲಿಂಗ್‌ಗಾಗಿ ನ್ಯಾಯಾಲಯಕ್ಕೆ ಕರೆಸಲಾಗಿತ್ತು. ಈ ವೇಳೆ ಪತ್ನಿ ವಿಚ್ಛೇದನ ನೀಡಲು ಒಪ್ಪದಿದ್ದಾಗ ಕೋಪಗೊಂಡ ವ್ಯಕ್ತಿ ಆಕೆಯ ಮುಖಕ್ಕೆ ಪಂಚ್ ಕೊಟ್ಟಿದ್ದಾನೆ. ಪರಿಣಾಮ ಮಹಿಳೆಯ ಹಲ್ಲು ಮುರಿದಿದೆ.
PublicNext
01/12/2021 03:14 pm