ಬೆಂಗಳೂರು : ನ.7ರಂದು ಹಾರೋಕ್ಯಾತನಹಳ್ಳಿಯಲ್ಲಿ ಪತ್ನಿಯೇ ತನ್ನ ಪತಿ ಕೊಲೆ ಮಾಡಿದ್ದಳು. 2ನೇ ಪತ್ನಿಯಾಗಿದ್ದ ನೇತ್ರಾ ಮಧ್ಯರಾತ್ರಿ ತುಮಕೂರು ರಸ್ತೆಯ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಗಂಡ ಪಾಲರ್ ಸ್ವಾಮಿ ಅಲಿಯಾನ್ ಸ್ವಾಮಿ ರಾಜ್ (50) ಅವರನ್ನು ಕೊಂದಿರುವುದಾಗಿ ಪೊಲೀಸರಿಗೆ ಹೇಳಿ ಶರಣಾಗಿದ್ದಳು.
ಇನ್ನು ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ನನ್ನ ಗಂಡ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸೆಕ್ಸ್ ವಿಚಾರವಾಗಿ ಅತಿರೇಕದ ವರ್ತನೆಯಿಂದ ಬೇಸತ್ತು ಕೊಲೆ ಮಾಡಿರೋದಾಗಿ ಸಬೂಬು ನೀಡಿದ್ದ ನೇತ್ರಾ ಹೇಳಿಕೆ ಮೇಲೆ ಅನುಮಾನಗೊಂಡ ತನಿಖೆ ಶುರು ಮಾಡಿದ ಪೊಲೀಸರಿಗೆ ಅಸಲಿ ಸತ್ಯ ತಿಳಿದಿದೆ.
ಹೌದು ಪ್ರಿಯಕರ ಹಾಗೂ ಅಕ್ಕನ ಮಗನ ಸಹಾಯದೊಂದಿಗೆ ನೇತ್ರಾ ಗಂಡನನ್ನು ಕೊಲೆ ಮಾಡಿರುವುದು ಬಯಲಾಗಿದೆ. ಕೊಲೆಗೆ ಸಹಕರಿಸಿದ ಪ್ರಿಯಕರ ಭರತ್ ಅಲಿಯಾನ್ ಅಚ್ಚು( 30) ಹಾಗೂ ನೇತ್ರಾ ಅಕ್ಕನ ಮಗ ವಿಜಯ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರ ಭರತ್ ಮತ್ತು ವಿಜಯ್ ನನ್ನು ಬಚಾವ್ ಮಾಡಲು ನೇತ್ರಾ ಪೊಲೀಸರಿಗೆ ಶರಣಾಗಿದ್ದರು. ವಕೀಲರನ್ನ ಹುಡುಕಿ ಜಾಮೀನು ಪಡೆಯಲು ವಿಜಯ್ ಗೆ 50 ಸಾವಿರ ಹಣವನ್ನು ಸಹ ನೇತ್ರಾ ನೀಡಿದ್ದರು. ಆದ್ರೆ ಪೊಲೀಸರ ತನಿಖೆ ವೇಳೆ ಭರತ್ ಮತ್ತು ವಿಜಯ್ ಸಿಕ್ಕಿಬಿದ್ದಿದ್ದಾರೆ.
PublicNext
30/11/2021 04:09 pm