ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಹಾರ ಅರಸಿ ಬಂದ ಜೀವಿಗಳಿಗೆ ವಿಷವಿಕ್ಕಿದರು!: 2 ಮಂಗಗಳ ಸಾವು

ಬೆಂಗಳೂರು: ಮಂಗಗಳಿಗೆ ವಿಷ ಹಾಕಿ ಸಾಯಿಸಿರುವ ಅನುಮಾನಾಸ್ಪದ ಘಟನೆ ನಡೆದಿದೆ. ಬಸವೇಶ್ವರ ನಗರದಲ್ಲಿ ಆಹಾರ ಅರಸಿ ಬಂದ ಎರಡು ಮಂಗಗಳು ವಿಷ ಪ್ರಾಶನದಿಂದಾಗಿ ಮೃತಪಟ್ಟಿದೆ.

ಈ ಬಗ್ಗೆ ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ, ಸಿಎಂ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಅರಣ್ಯ ಅಧಿಕಾರಿಗಳಿಗೆ ಪ್ರತ್ಯಕ್ಷ ದರ್ಶಿಯೊಬ್ಬರು ದೂರು ಸಲ್ಲಿಸಿದ್ದಾರೆ.

ವಿಷ ಪ್ರಾಶನ ಮಾಡಿದ ಮಂಗವೊಂದು ಮೃತಪಟ್ಟಿದ್ದು ಪತ್ತೆಯಾಗಿದ್ದರೆ, ಮತ್ತೊಂದು ಮಂಗ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ವಿಷಯ ತಿಳಿದ ಪೀಪಲ್ಸ್ ಫಾರ್ ಎನಿಮಲ್ ಸಂಸ್ಥೆಯ ಸದಸ್ಯರು ಚಿಕಿತ್ಸೆ ನೀಡಿದ್ದಾರೆ. ಆದರೂ ಮಂಗ ಬದುಕಿ ಉಳಿಯಲಿಲ್ಲ.

Edited By : Nagaraj Tulugeri
PublicNext

PublicNext

30/11/2021 01:21 pm

Cinque Terre

32.66 K

Cinque Terre

5

ಸಂಬಂಧಿತ ಸುದ್ದಿ