ಮೈಸೂರು: ಕುತ್ತಿಗೆಗೆ ವೈಯರ್ ಬಿಗಿದು ಅಪರಿಚಿತ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ನಗರದ ಸಯ್ಯಾಜಿರಾವ್ ರಸ್ತೆಯ ಕಾಡಾ ಕಚೇರಿಯಲ್ಲಿ ನಡೆದಿದೆ.
ಕೊಲೆಯಾದವ ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿ ಇರಬಹುದೆಂದು ಅಂದಾಜಿಸಲಾಗಿದೆ. ಇನ್ನೂ ಕೂಡ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಚಿಂದಿ ಆಯುವವನಂತೆ ಕಾಣುವ ಈತನ ಕುತ್ತಿಗೆಯನ್ನ ವೈಯರ್ನಿಂದ ಬಿಗಿದಿರುವುದರಿಂದ ಕಿವಿ, ಮೂಗಿನಿಂದ ರಕ್ತಸ್ರಾವವಾಗಿದೆ ಪೊಲೀಸರು ಕಾಡಾ ಕಚೇರಿಯಲ್ಲಿ ಕಡತಕ್ಕೆ ಸಹಿ ಹಾಕಲು ಬಂದಾಗ ಶವ ಪತ್ತೆಯಾಗಿದೆ. ಈ ಸಂಬಂಧ ಕೆ.ಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
30/11/2021 10:46 am