ಹಾಸನ: ಮ್ಯಾನ್ ಹೋಲ್‌ಗೆ ಯಾವುದೇ ಪೌರ ಕಾರ್ಮಿಕರನ್ನು ಇಳಿಸಬಾರದು ಎಂಬ ನಿಯಮ ಇದೆ. ಆದರೂ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್‌ಗೆ ಇಳಿಸಿ ಸ್ವಚ್ಛ ಮಾಡಿಸಲಾಗಿದೆ. ಈ ಮೂಲಕ ಅಮಾನವೀಯತೆ ತೋರಲಾಗಿದೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳೇ ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್‌ಗೆ ಇಳಿಸಿದ್ದಾರೆ ಎಂಬ ಆರೋಪ ಇದೆ. ಈ ವೇಳೆ ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನೂ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳ ಈ ಮಟ್ಟದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನು ಹೊಳೆನರಸೀಪುರ ಪಟ್ಟಣ ಪಂಚಾಯ್ತಿಯಲ್ಲಿ ಸಕ್ಕಿಂಗ್ ಯಂತ್ರ ಇದ್ದರೂ ಅದನ್ನು ಬಳಸದೇ ನೇರವಾಗಿ ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್‌ಗೆ ಇಳಿಸಿದ್ದರ ಉದ್ದೇಶವೇನು? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಹಾಗೂ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.
PublicNext
28/11/2021 10:50 pm