ಹಾಸನ: ಇಲ್ಲೊಬ್ಬ ಕಿರಾತಕ ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟು, ಮತ್ತೊಂದು ಮದುವೆ ಆಗಲು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆ.
ಪತಿ ಲೋಹಿತ್ ಹಾಗೂ ಆತನ ಕುಟುಂಬದ ವಿರುದ್ಧ ಮೊದಲ ಪತ್ನಿ ಅಕ್ಷತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಕ್ಷತಾ ಹಾಗೂ ಲೋಹಿತ್ ಕಾಲೇಜಿನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾ ಕಿರುಕುಳ ಕೊಡುತ್ತಿದ್ದರು ಎನ್ನುವ ಆರೋಪ ಕೂಡ ಇದೆ. ಈಗ ತನ್ನಿಂದ ಗಂಡನನ್ನು ದೂರಮಾಡಿ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿರುವುದಾಗಿ ಮೊದಲ ಪತ್ನಿ ದೂರು ನೀಡಿದ್ದಾಳೆ.
ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಲೋಹಿತ್ ಎಂಗೇಜ್ಮೆಂಟ್ ಆಗಿದ್ದಾನೆ. ಈ ಬಗ್ಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಮದುವೆಯಾಗಿ 8 ವರ್ಷದ ಮಗನಿದ್ದರು ಬೇರೆ ಮದುವೆಯಾಗಲು ಲೋಹಿತ್ ಕುಟುಂಬ ಪ್ಲಾನ್ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದ್ದು, ಯುವತಿ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಮಾವ ಮಲ್ಲಿಕಾರ್ಜುನ, ಅತ್ತೆ ಜಯಶೀಲ, ಮೈದುನ ದರ್ಶನ್ ಹಾಗೂ ಪತಿ ವಿರುದ್ಧ ಕ್ರಮಕ್ಕೆ ಅಕ್ಷತಾ ದೂರು ನೀಡಿ, ವಂಚಕ ಪತಿಯಿಂದ ನ್ಯಾಯಕೊಡಿಸಿ ಎಂದು ಪೊಲೀಸ್ ಮೊರೆ ಹೋಗಿದ್ದಾಳೆ.
PublicNext
28/11/2021 10:07 am