ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಟೋ ಹತ್ತಿದ್ದ ಗ್ರಾಹಕನಿಗೆ ಚಾಕು ತೋರಿಸಿ ದರೋಡೆ

ಬೆಂಗಳೂರು: ಆಟೋದಲ್ಲಿ ಹತ್ತಿದ್ದ ಗ್ರಾಹಕನನ್ನು ದರೋಡೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಉಪ್ಪಾರಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೆಜೆಸ್ಟಿಕ್‌ನಿಂದ ಬೊಮ್ಮನಹಳ್ಳಿಗೆ ತೆರಳಲು ಯುವಕನೊಬ್ಬ ಆಟೋ ಹತ್ತಿದ್ದ. ಚಾಲಕ ಸ್ವಲ್ಪ ದೂರ ಆತನನ್ನು ಕರೆದೊಯ್ದಿದ್ದಾನೆ. ನಂತರ ಆಟೋಗೆ ತನ್ನ ನಾಲ್ಕು ಜನ ಸಹಚರರನ್ನು ಹತ್ತಿಸಿಕೊಂಡು ಯುವಕನಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಕ್ಯಾಮೆರಾ ಹಾಗೂ ಲ್ಯಾಪ್‌ಟಾಪ್ ದೋಚಿಕೊಂಡು ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು, ಆಟೋ ಚಾಲಕ ಮನೋಜ್ ಕುಮಾರ್‌ನನ್ನು ಅರೆಸ್ಟ್ ಮಾಡಿದ್ದಾರೆ. ದೋಚಿದ್ದ 7ಲಕ್ಷ ಬೆಲೆ ಬಾಳುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಉಳಿದ ಮೂವರು ಆರೋಪಿಗಳಿಗಾಗಿ ಉಪ್ಪಾರಪೇಟೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagaraj Tulugeri
PublicNext

PublicNext

27/11/2021 06:15 pm

Cinque Terre

119.31 K

Cinque Terre

5

ಸಂಬಂಧಿತ ಸುದ್ದಿ