ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ ಪಾಲಿಕೆ ಆಯುಕ್ತರ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ- ಅಶ್ಲೀಲ ಚಾಟ್ ವೈರಲ್

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ಧ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಸ್ನೇಹಲ್ ಲೋಖಂಡೆ ಅವರು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ಕೈಕೊಟ್ಟಿದ್ದಾರೆ ಎಂದು ನವದೆಹಲಿ ಮೂಲದ ಯುವತಿ ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿಗೆ ದೂರು ನೀಡಿದ್ದಾರೆ. ಯುವತಿಯ ಈ ಪತ್ರವು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಯುವತಿಯ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಯುಕ್ತ ಸ್ನೇಹಲ್ ಲೋಖಂಡೆ, "ನನ್ನ ವಿರುದ್ಧ ಆರೋಪಿಸಿರುವ ಯುವತಿ ಯಾರೆಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೂ ನಾನು ದೂರು ನೀಡಿದ್ದೇನೆ. ನನ್ನ ಹೆಸರು ಕೆಡಿಸುವುದಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ. ಆ ಯುವತಿ ಜತೆ ನಾನು ಯಾವುದೇ ಚಾಟಿಂಗ್ ಮಾಡಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಫೋಟೋ ಚಾಟಿಂಗ್ ಬಗ್ಗೆಯೂ ನನಗೆ ಗೊತ್ತಿಲ್ಲ. ಆ ಫೋಟೋಗಳು ಎಲ್ಲಿಂದ ತೆಗೆದುಕೊಂಡರೆಂದು ಗೊತ್ತಿಲ್ಲ. ವಾಟ್ಸಾಪ್ ಚಾಟಿಂಗ್ ಸಂಪೂರ್ಣ ಸುಳ್ಳು" ಎಂದು ತಿಳಿಸಿದ್ದಾರೆ.

ಯುವತಿ ಆರೋಪವೇನು?

2017ರ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಸ್ನೇಹಲ್ ಮಹಾರಾಷ್ಟ್ರದ ನಾಗಪುರ ಮೂಲದವರು. 2019ರಲ್ಲಿ ಫೇಸ್​ಬುಕ್ ಮೂಲಕ ದೆಹಲಿ ಮೂಲಕದ ಯುವತಿಯ ಪರಿಚಯವಾಗಿತ್ತು. ಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದಾಗ ಸ್ನೇಹಲ್ ಲೋಖಂಡೆ ಜತೆಗೆ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮದುವೆಯಾಗುವೆ ಎಂದು ಭರವಸೆ ನೀಡಿದ್ದ ಕಾರಣ ಪರಸ್ಪರ ದೈಹಿಕ ಸಂಬಂಧ ಬೆಳೆದಿದೆ‌. ಒಂದು ವರ್ಷಕ್ಕೂ ಹೆಚ್ಚು ಅವಧಿ ಬಳಸಿಕೊಂಡ ಬಗ್ಗೆ ಯುವತಿ ವಿವರಣೆ ನೀಡಿದ್ದಾಳೆ. ವಿವಿಧೆಡೆ ಭೇಟಿ ನೀಡಿದ ದಿನಾಂಕ, ಹೋಟೆಲ್, ಲಾಡ್ಜ್ ರೂಮ್ ಹಾಗೂ ಹಾಸ್ಟೆಲ್​ಗೆ ಸ್ನೇಹಲ್ ಲೋಖಂಡೆ ಕರೆದೊಯ್ದಿರುವ ವಿಳಾಸದ ಮಾಹಿತಿ ಹಂಚಿಕೊಂಡಿದ್ದಾಳೆ. ಸ್ನೇಹಲ್ ಜತೆಗೆ ಮಾತನಾಡಿದ ವಾಯ್ಸ್ ರೆಕಾರ್ಡಿಂಗ್ ಸಹ ಲಭ್ಯವಿದೆ. ದೈಹಿಕವಾಗಿ ಬಳಸಿಕೊಂಡು ನಂತರ ಐ-ಪಿಲ್ ಟ್ಯಾಬ್ಲೆಟ್ ನುಂಗಲು ಹೇಳಿದ ಎಂದು ಯುವತಿ ದೂರಿದ್ದಾಳೆ.

ಅಶ್ಲೀಲ ಚಾಟ್ ಸಹ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಯುವತಿ, ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ನಿರಾಕರಿಸಿದ್ದಾರೆ. ಸ್ನೇಹಲ್ ಲೋಖಂಡೆ, ತಾನೊಬ್ಬ ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಯುವತಿಯರ ಜತೆಗೆ ಸಲುಗೆ ಬೆಳೆಸಿ, ನಂಬಿಸಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವ ಮನಸ್ಥಿತಿಯನ್ನು ಹೊಂದಿದ್ದಾರೆ. ಇಂಥವರಿಗೆ ಜೈಲಿನಲ್ಲಿಟ್ಟು ಯುವತಿಯರ ಬಾಳು ರಕ್ಷಿಸಬೇಕು ಎಂದ ಯುವತಿ ಮನವಿ ಮಾಡಿಕೊಂಡಿದ್ದಾಳೆ.

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಚಿವೆ ಸ್ಮ್ರತಿ ಇರಾನಿಗೂ ಯುವತಿ ದೂರು ನೀಡಿದ್ದಾಳೆ. ಇದರೊಟ್ಟಿಗೆ ಸಿಎಂ ಬೊಮ್ಮಾಯಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಗೂ ಟ್ವಿಟರ್ ಮೂಲಕ ಯುವತಿ ದೂರು ನೀಡಿದ್ದಾಳೆ. ಅಲ್ಲದೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ನೀಡಿ ನ್ಯಾಯ ಕೋರಿದ್ದಾಳೆ. ಆದರೆ, ಯುವತಿ ದೂರು ನೀಡಿ ಒಂದು ವಾರ ಕಳೆದರೂ ಯಾವುದೇ ಕ್ರಮ ಜರುಗಿಲ್ಲ.

Edited By : Vijay Kumar
PublicNext

PublicNext

27/11/2021 05:51 pm

Cinque Terre

39.72 K

Cinque Terre

0