ಮುಂಬೈ:ಕೆಟ್ಟ ಬುದ್ಧಿ ಕಲಿಯಲೇ ಬೇಡ. ಒಳ್ಳೆಯ ಬುದ್ಧಿ ಕಲಿತು ಒಳ್ಳೆಯವರಾಗಿ ಎಂದು ಹೇಳಿದ್ದೇ ತಪ್ಪಾಯಿತು ನೋಡಿ. ಇಲ್ಲಿಯ ನಾಲ್ಕು ಜನ ಬಾಲಕರು ಸಾಮಾಜಿಕ ಕಾರ್ಯಕರ್ತನನ್ನೆ ಕೊಂದು ಹಾಕಿದ್ದಾರೆ.
ಹತ್ಯೆಯಾದ ವ್ಯಕ್ತಿಯ ಹೆಸರು ಸುನೀಲ್ ಜಾವಡೆ. ಸಮತಾ ಸೈನಿಕ ದಳದ ಕಾರ್ಯಕರ್ತರು.ತರಕಾರಿ ವ್ಯಾಪಾರಿ ಕೂಡ ಹೌದು. ದುರಂತ ನೋಡಿ ಇಲ್ಲಿಯೆ ಇದ್ದ ನಾಲ್ವರು ಹುಡುಗರಿಗೆ ಬುದ್ದಿ ಹೇಳಿದ್ದಾರೆ. ಡ್ರಗ್ಸ್ ಚಟಕ್ಕೆ ಬಿದ್ದ ಇವರಿಗೆ ಸುನೀಲ್ ಬುದ್ಧಿ ಹೇಳಿದ್ದಾರೆ.
ಇಷ್ಟೇ ನೋಡಿ, ಮುಖಕ್ಕೆ ಖಾರದಪುಡಿ ಎರಚಿ ಬೈಕ್‌ನಿಂದ ಕೆಳಗಡೆ ಎಳೆದು ಚಾಕುವಿನಿಂದ ತಿವಿದು ಸಾಯಿಸಿದ್ದಾರೆ. 15 ರಿಂದ 16 ವರ್ಷದ ಈ ನಾಲ್ವರನ್ನ ಇಮಾಮ್‌ಬಾದ್ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬ ಈ ಹಿಂದೆ ಹಲ್ಲೆ ಪ್ರಕರಣವೊಂದರಲ್ಲಿ ಭಾಗಿ ಆಗಿದ್ದಾನೆ.
PublicNext
26/11/2021 07:42 pm